ಕಲ್ಮಕಾರು: ಮೂರ್ತೆಗೆ ತೆಂಗಿನ ಮರವೇರಿದ್ದ ವ್ಯಕ್ತಿ ಅಲ್ಲೇ ಮೃತ್ಯು

0

ಕೊಲ್ಲಮೊಗ್ರದ ಪನ್ನೆ ಬಳಿ ವ್ಯಕ್ತಿಯೋರ್ವರು ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ಸಂದರ್ಭ ಮರದಲ್ಲೇ ಮೃತ ಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಕೊಲ್ಲಮೊಗ್ರು ಬಳಿಯ ಪನ್ನೆಯ ವ್ಯಕ್ತಿಯೋರ್ವರ ಜಾಗದ ತೆಂಗಿನ ಮರದಿಂದ ಕೇರಳ ಮೂಲದ ವ್ಯಕ್ತಿಯೊಬ್ಬರು ಶೇಂದಿ ಮೂರ್ತೆ ನಡೆಸುತ್ತಿದ್ದು ಇಂದು ಕೂಡಾ ಶೇಂದಿ ಇಳಿಸಲು ಮರ ಹತ್ತಿದ್ದ ಅವರು ಅಲ್ಲೇ ಅಸ್ವಸ್ಥಗೊಂಡು ಬೊಬ್ಬೆ ಹಾಕಿದರೆನ್ನಲಾಗಿದೆ. ಇದನ್ನು ಕೇಳಿಸಿಕೊಂಡ ಸ್ಥಳೀಯ ರೋರ್ವರು ಗಮನಿಸಿ ಮರ ಹತ್ತಿದಾಗ ಅವರು ಅವರು ಉಸಿರಾಡುತ್ತಿದ್ದರೆನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳದವರು ಬಂದ ಮೇಲೆ ಸ್ಥಳೀಯರೋರ್ವರು ಮರ ಹತ್ತಿ ನೋಡಿದಾಗ ಅವರು ಮೃತ ಪಟ್ಟಿದ್ದರೆನ್ನಲಾಗಿದೆ. ಬಳಿಕ ಅವರ ದೇಹವನ್ನು ಕೆಳಗಿಳಿಸಲಾಯಿತೆಂದು ತಿಳಿದು ಬಂದಿದೆ.