ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ತೊಂದರೆ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ಇಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚುತ್ತಿರುವ ಸಮಸ್ಯೆಯಾಗಿದೆ. ನಾಯಿಗಳು ಗುಂಪು ಗುಂಪಾಗಿ ಭಕ್ತಾದಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಅಡ್ಡಬರುತ್ತಿವೆ. ಇದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ಮತ್ತು ದ್ವಿಚಕ್ರ ವಾಹನ ಸವಾರರು, ಭಕ್ತಾದಿಗಳು ಆತಂಕಕ್ಕೆ ಒಳಗಾಗಿದ್ದಾರೆ.















ರಾತ್ರಿ ಸಮಯದಲ್ಲಿ ಬೀದಿಯಲ್ಲಿ ಉರುಳು ಸೇವೆ ಮಾಡುವ ಭಕ್ತಾದಿಗಳಿಗೆ ಸಾಗಲು ಕಷ್ಟಕರವಾಗಿದ್ದು, ನಾಯಿಗಳು ಒಂದಕ್ಕೊಂದು ಕಚ್ಚಿಕೊಂಡು ಮೇಲೆರಗಿ ಬರುತ್ತವೆ. ಇಂದು ಪಂಚಮಿ ರಥೋತ್ಸವ ಹಾಗೂ ನಾಳೆ ಬೆಳಿಗ್ಗೆ ಚಂಪಾ ಷಷ್ಟಿ ರಥೋತ್ಸವವು ನಡೆಯಲಿದ್ದು, ಈ ಸಂದರ್ಭದಲ್ಲಿ ಅಧಿಕ ಸಂಖ್ಯೆಯ ಭಕ್ತಾದಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಇದೇ ರೀತಿ ನಾಯಿಗಳ ಕಾಟ ಇದ್ದರೆ ಸಮಸ್ಯೆ ಎದುರಾಗುವುದಂತೂ ಖಂಡಿತ. ಈ ಸಮಸ್ಯೆಯನ್ನು ನಿಯಂತ್ರಿಸಲು ಪಂಚಾಯತ್ ನವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.










