
ಧರ್ಮಸ್ಥಳ ಧರ್ಮಾಧಿಕಾರಿ
ಡಾ.ವೀರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಳ್ಯ ತಾಲೂಕು ಭಕ್ತಾದಿಗಳಿಂದ ಸುಳ್ಯದ ಶ್ರೀ ಚೆನ್ನಕೇಶವ ಸ್ವಾಮಿಗೆ ಮಹಾಪೂಜೆ ಮತ್ತು ವಿಶೇಷ ಪ್ರಾರ್ಥನೆ ನ.25ರಂದು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಬಿ.ಫೌಂಡೇಶನ್‌ನ ಅಧ್ಯಕ್ಷ ಎಂ.ಬಿ.ಸದಾಶಿವ ‘ಡಾ.ವೀರೇಂದ್ರ ಹೆಗ್ಗಡೆಯವರು
ಸಮಾಜದ ಎಲ್ಲರನ್ನೂ ಸಮಾನಾಗಿ ಪ್ರೀತಿಸಿದ್ದಾರೆ, ಎಲ್ಲರಿಗೂ ನೆರವು ನೀಡಿದ್ದಾರೆ. ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯವಾದುದು. ಅವರ ಶಕ್ತಿ, ಹುಮ್ಮಸ್ಸು ಇನ್ನಷ್ಟು ಹೆಚ್ಚಾಗಲಿ, ಧರ್ಮಸ್ಥಳದ ಎಲ್ಲಾ ಭಕ್ತರು ಅವರ ಹಿಂದೆ ಇದ್ದೇವೆ ಎಂದು ಹೇಳಿದರು. ರೆಡ್ ಕ್ರಾಸ್ ಸುಳ್ಯ ತಾಲೂಕು ಘಟಕದ ಸಭಾಪತಿ ಪಿ.ಬಿ.ಸುಧಾಕರ ರೈ ಮಾತನಾಡಿ ಸುಳ್ಯದವರಿಗೆ ಧರ್ಮಸ್ಥಳದೊಂದಿಗೆ ವಿಶೇಷ ಋಣ ಇದೆ. ಮಹಿಳೆಯರನ್ನು ಸ್ವಾವಲಂಬಿಯಾಗಿಸಿದ, ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದವರು ಡಾ.ವೀರೇಂದ್ರ ಹೆಗ್ಗಡೆಯವರು ಎಂದು ಹೇಳಿದರು ಅವರಿಗೆ ಸಮಾಜ ಸೇವೆ ಮಾಡಲು ಇನ್ನಷ್ಟು ಶಕ್ತಿ ದೊರಕಲಿ ಎಂದು ಹೇಳಿದರು.















ನಿವೃತ್ತ ಪ್ರಾಂಶುಪಾಲ
ಪ್ರೊ.ಎಂ.ಬಾಲಚಂದ್ರ ಗೌಡ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು, ಚೆನ್ನಕೇಶವ ದೇವಸ್ಥಾನದ ಕೃಪಾಶಂಕರ ತುದಿಯಡ್ಕ, ಬೂಡು ರಾಧಾಕೃಷ್ಣ ರೈ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ಅಧ್ಯಕ್ಷ
ಸೋಮಶೇಖರ ಪೈಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.










