ಡಾ. ವೀರೇಂದ್ರ ಹೆಗ್ಗಡೆಯವರ 78 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

0

ನಾಲ್ಕೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಗುತ್ತಿಗಾರು ವಲಯದ ನಾಲ್ಕೂರು ಒಕ್ಕೂಟಗಳ ವಾರ್ಷಿಕೋತ್ಸವ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ೭೮ ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.


ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮೂಲಕ ಮನೆ ಮನೆಗಳಲ್ಲಿ ಆರ್ಥಿಕ, ಸಾಮಾಜಿಕ, ಸೈಕ್ಷಣಿಕ, ಅಭಿವೃದ್ಧಿಗೆ ಕಳೆದ ೨೦ ವರ್ಷಗಳಿಂದ ಗ್ರಾಮದ ನೂರಾರು ಕುಟುಂಬಗಳು ಸೇರಿಕೊಂಡು ಒಕ್ಕೂಟ ವ್ಯವಸ್ಥೆಯ ಮೂಲಕ ಬದುಕು ರೂಪಿಸಿ ಇಂದು ಸ್ವಸ್ಥ ಬದುಕು ನಡೆಸುತ್ತಿರುವ ಸಂಘಗಳ ಸದಸ್ಯರ ಜೀವನ ಇನ್ನಷ್ಟು ಅಭಿವೃದ್ಧಿಯಾಗಲಿ ಎನ್ನುವ ಸಂಕಲ್ಪ ದೊಂದಿಗೆ ,ಮಾರ್ಗದರ್ಶಕರಾಗಿ ಸಮಾಜಕ್ಕೆ ಸಮಾಜಮುಖಿ ಸೇವಾಕಾರ್ಯಗಳ ಮೂಲಕ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ೭೮ ನೇ ವರ್ಷದ ಹುಟ್ಟು ಹಬ್ಬದ ದಿನ, ಇವರ ಸೇವಾ ಕಾರ್ಯಕ್ಕೆ ಭಗವಂತ ಇನ್ನಷ್ಟು ಆಯಸ್ಸು, ಆರೋಗ್ಯ ನೀಡಲಿ ಎಂದು ದೇವಿ ಸನ್ನಿಧಾನದಲ್ಲಿ ಸಂಕಲ್ಪಿಸಿ,ಪ್ರಾರ್ಥಿಸಿ ಮಹಾಪೂಜೆ ನೆರವೇರಿಸಲಾಯಿತು. ಒಕ್ಕೂಟದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.


ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಪದ್ಮನಾಭ ಪರಮಲೆ, ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಜೇಶ್ ಉತ್ರಂಬೆ, ವೆಂಕಪ್ಪ ನಾಯ್ಕ ಅಂಜೇರಿ, ಷಣ್ಮುಖ ಅಂಬೆಕಲ್ಲು, ಚಂದ್ರಾವತಿ ಉತ್ರಾಂಬೆ ಮೊದಲಾದವರು ಉಪಸ್ಥಿತರಿದ್ದರು.