ಕಟ್ಟೆಗೆ ಚಕ್ರ ತಾಗಿ ಸ್ವಲ್ಪ ಹೊತ್ತು ನಿಂತ ರಥ, ಬಳಿಕ ಸಾಂಗವಾಗಿ ನಡೆದ ರಥೋತ್ಸವ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಠಿ ಜಾತ್ರೋತ್ಸವದ ಬ್ರಹ್ಮರಥೋತ್ಸವ ಇಂದು ನಡೆದಿದ್ದು, ಬೆಳಗ್ಗೆ ಬ್ರಹ್ಮರಥ ಹೊರಟು ನೂರು ಅಡಿ ತಲುಪುವಷ್ಟರಲ್ಲಿ ಭಕ್ತಾದಿಗಳ ನೂಕುನುಗ್ಗಲಿನ ಮಧ್ಯೆ ಬಲಗಡೆಗೆ ಹೋದ ಪರಿಣಾಮ ಸ್ವಲ್ಪ ಹೊತ್ತು ನಿಂತ ಘಟನೆ ನಡೆಯಿತು.















ರಥ ಎಳೆಯಲು ಆರಂಭವಾದ ಹೊತ್ತಿನಲ್ಲೆ ತಡೆ ಬೇಲಿ ಇದ್ದರೂ ಭಕ್ತಾದಿಗಳ ನೂಕು ನುಗ್ಗಲು ಉಂಟಾಯಿತು. ಆಗ ರಥವು ರಥಬೀದಿಯ ಬದಿಯ ಕಟ್ಟೆಯತ್ತ ಒರಗಿ ನಿಂತಿತು. 15 ನಿಮಿಷಗಳಲ್ಲಿ ಮತ್ತೆ ರಥವನ್ನು ರಥಬೀದಿಗೆ ಅಭಿಮುಖವಾಗಿ ಎಳೆದಾಗ ಸಾಂಗವಾಗಿ ರಥೋತ್ಸವ ನಡೆಯಿತು.










