ಸುಬ್ರಹ್ಮಣ್ಯ: ಕೆ. ಎಸ್. ಎಸ್. ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಕುಸುಮ ಸ್ನೇಹ ಸಂಗಮ ಕಾರ್ಯಕ್ರಮ ಆಮಂತ್ರಣ ಬಿಡುಗಡೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಕುಸುಮ ಸ್ನೇಹ ಸಂಗಮ ಕಾರ್ಯಕ್ರಮವು ಡಿ. 28 ದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ಕಾಲೇಜಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಂಗಯ್ಯ ಶೆಟ್ಟಿಗಾರ್, ನಿವೃತ್ತ ಉಪನ್ಯಾಸಕರಾದ ತಿಲಕ್ ಎ.ಎ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಕಾರ್ಯದರ್ಶಿಯಾದ ತೇಜಸ್ ಕಳಿಗೆ, ಸಂಯೋಜಕರಾದ ಶ್ರೀಲತಾ ಕಮಿಲಾ, ನಿರ್ದೇಶಕರಾದ ವೀಮಲಾ ರಂಗಯ್ಯ, ಲೋಕೇಶ್ ಬಿ. ನ್, ಪ್ರದೀಪ್ ಕಳಿಗೆ, ದಿನೇಶ್ ಎಸ್. ನ್, ಗೋವರ್ಧನ್, ಐ.ಕ್ಯೂ. ಎ. ಸಿ ಸಂಯೋಜಕರಾದ ಲತಾ ಬಿ. ಟಿ ಹಾಗೂ ಕಾಲೇಜಿನ ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.