ಜಾಲ್ಸೂರು‌-ಅಡ್ಕಾರು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

0

ದ.ಕ. ಜಿ.ಪ.ಸ.ಉ.ಹಿ.ಪ್ರಾ.ಶಾಲೆ. ಜಾಲ್ಸೂರು (ಅಡ್ಕಾರು) ಶಾಲಾ ಎಸ್.ಡಿ.ಎಂ.ಸಿ, ಹಳೆ ವಿದ್ಯಾರ್ಥಿ ಸಂಘ, ಮತ್ತು ಸ್ವಾಗತ ಸಮಿತಿಗಳ ಸಹಯೋಗದೊಂದಿಗೆ
ಪ್ರತಿಭಾ ದಿನಾಚರಣೆ ಕಾರ್ಯಕ್ರಮವು ನ.29ರಂದು ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಗೋಪಾಲ್ ರವರು ವಹಿಸಿದ್ದರು. ಉದ್ಘಾಟನೆಯನ್ನು ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕರು ಹಾಗೂ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಜಾಲ್ಸೂರು ಇದರ ಅಧ್ಯಕ್ಷ, ಹಿರಿಯ ವಿದ್ಯಾರ್ಥಿ ಸುಧಾಕರ ಕಾಮತ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಗುಜರಾತ್ ಸ್ಮೃತಿ ವನದ ರೂವಾರಿ, ಗ್ರೀನ್ ಹೀರೋ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತರಾದ, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ.ಆರ್.ಕೆ. ನಾಯರ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಸಂಧ್ಯಾ ವಾಗ್ಲೆ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಣೇಶ್ ಅಂಬಾಡಿ ಮೂಲೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್ ನಡುವಡ್ಕ‌, ಸ್ವಾಗತ ಸಮಿತಿ ಅಧ್ಯಕ್ಷರಾದ ಹೆಚ್. ಎ. ಮಹಮ್ಮದ್ ಕುಂಞಿ, ಹಿರಿಯ ಹಳೆ ವಿದ್ಯಾರ್ಥಿ, ಎನ್ ಮಹಮ್ಮದ್ ಕುಂಞಿ, ಹಿರಿಯ ನಿವೃತ್ತ ಶಿಕ್ಷಕಿ ಕಲಾವತಿ ಟೀಚರ್, ಮುಖ್ಯ ಶಿಕ್ಷಕಿ ವಸಂತಿ ಎಂ, ಉಪಸ್ಥಿತರಿದ್ದರು.

ಪೂರ್ವಾಹ್ನ 9.30 ರಿಂದ ಪ್ರಾರಂಭವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವೀರ ಅಭಿಮನ್ಯು ಎಂಬ ಯಕ್ಷಗಾನ ಮತ್ತು ಹಳೆ ವಿಧ್ಯಾರ್ಥಿಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಿವ ಪ್ರಸಾದ್ ಆಲೆಟ್ಟಿ ಮತ್ತು ಅವರ ತಂಡದವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಿತು.
ಶಾಲಾ ಎಸ್.ಡಿ.ಎಂ.ಸಿ, ಹಳೆ ವಿದ್ಯಾರ್ಥಿ ಸಂಘ, ಸ್ವಾಗತ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು, ಸರ್ವ ಸದಸ್ಯರು, ಊರಿನ ವಿದ್ಯಾಭಿಮಾನಿಗಳು, ಹಳೆ ವಿಧ್ಯಾರ್ಥಿಗಳು, ಪೋಷಕರು, ಕಾರ್ಯಕ್ರಮ ಮಹಾಪೋಷಕರು, ಪ್ರಾಯೋಜಕರು, ದಾನಿಗಳು, ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರ ಸಹಕಾರದಿಂದ ಕಾರ್ಯಕ್ರಮವು ಮೂಡಿ ಬಂತು.

ಈ ಶಾಲೆಯಲ್ಲಿ 1963 ರಿಂದ 1976 ತನಕ ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನೆಚ್ಚಿನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಹಿರಿಯ ನಿವೃತ್ತ ಶಿಕ್ಷಕಿ ಶ್ರೀಮತಿ ಕಲಾವತಿ ಟೀಚರ್, ಡಾ.ಆರ್.ಕೆ. ನಾಯರ್ ರನ್ನು, ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿದ ಗುರುಗಳು ಕೋಡ್ಲ ಗಣಪತಿ ಭಟ್, ಮತ್ತು ನೃತ್ಯ ಕಲಿಸಿದ ನಾಟ್ಯ ಶಿಕ್ಷಕಿ ಶ್ರೀಮತಿ ಚಂದ್ರಕಲಾ ರವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ ಎಂ. ಸ್ವಾಗತಿಸಿದರು. ದಿನೇಶ್ ಅಡ್ಕಾರು ವಂದಿಸಿದರು. ಭಾಸ್ಕರ ಅಡ್ಕಾರು ಕಾರ್ಯಕ್ರಮ ನಿರೂಪಿಸಿದರು.