ಬಡ್ಡಡ್ಕದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ

0

ರೋಟರಿ ಕ್ಲಬ್ ಸುಳ್ಯ ಮತ್ತು ಅಮರ ಕ್ರೀಡಾ ಮತ್ತು ಕಲಾ ಸಂಘ ಬಡ್ಡಡ್ಕ ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ನ.30ರಂದು ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆಯಿತು.

ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಸೆಂಟರ್ ಹಾಗೂ ಪ್ರಸಾದ್ ರೋಟರಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಶಿಬಿರ ನಡೆಸಲಾಯಿತು. ಉದ್ಘಾಟನೆ ಯನ್ನು ಆಲೆಟ್ಟಿ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ನೆರವೇರಿಸಿದರು.


ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಮಮೋಹನ್‌ ಕೆ.ಎನ್.ಸಭಾ ಅಧ್ಯಕ್ಷತೆ‌ ವಹಿಸಿದ್ದರು. ಅತಿಥಿಗಳಾಗಿ ಆಲೆಟ್ಟಿ‌ ಗ್ರಾ.ಪಂ. ಅಧ್ಯಕ್ಷೆ ವೀಣಾ ವಸಂತ್, ಅಮರಕ್ರೀಡಾ ಮತ್ತು ಕಲಾ ಸಂಘದ ‌ಬೆಳ್ಳಿ ಹಬ್ಬ ಸಮಿತಿಯ‌ ಗೌರವಾಧ್ಯಕ್ಷ ಶಾಂತಾರಾಮ ಭಟ್ಟ ಶಾಂತಮಂಗಲ, ಅಧ್ಯಕ್ಷ ಡಾ.ಜಯದೀಪ್ ಎನ್.ಎ., ಅಮರಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕೆ. ಭಾಗವಹಿಸಿದ್ದರು.