ಶಿಕ್ಷಕರಿಗೆ ಅಭಿನಯ ಕೌಶಲ್ಯ ಅಗತ್ಯ : ಮೈಮ್ ರಾಮ್ ದಾಸ್
ರಂಗ ಚಟುವಟಿಕೆಗಳ ಮೂಲಕ ಶಿಕ್ಷಕರು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ. ಹಾಡು ನೃತ್ಯ ಹಾಗೂ ಅಭಿನಯದ ಮೂಲಕ ನೀಡುವ ಶಿಕ್ಷಣ ಮಕ್ಕಳ ಕಲಿಕೆಗೆ ಸಹಕರಿಯಾಗುತ್ತದೆ ಎಂದು ಕಾಂತಾರ ಮತ್ತು ಸು ಫ್ರಮ್ ಸೋ ಖ್ಯಾತಿಯ ನಟ,ಜಾನಪದ ಕಲಾವಿದ ಮೈಮ್ ರಾಮ್ ದಾಸ್ ಹೇಳಿದರು.

ಅವರು ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಕೇಂದ್ರದ ವತಿಯಿಂದ ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ಹಾಗೂ ಆಸಕ್ತ ಶಿಕ್ಷಕಿಯರಿಗೆ ಎರಡು ದಿನ ನಡೆದ ರಂಗ ಚಟುವಟಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.















ನಟ, ಹಿನ್ನಲೆ ಗಾಯಕ ಮೈಮ್ ರಾಮ್ ದಾಸ್, ವಿಧೂಷಿ ರಂಗ ಕಲಾವಿದೆ ಮಲ್ಲಿಕಾ ಜ್ಯೋತಿಗುಡ್ಡೆ, ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಅವರನ್ನು ಇದೇ ಸಂದರ್ಭದಲ್ಲಿ ಜ್ಞಾನದೀಪ ಸಂಸ್ಥೆಯ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಸಂಜಯ್ ನೆಟ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಸ್ವಾಗತಿಸಿದರು. ಉಪನ್ಯಾಸಕ ಯೋಗೀಶ್ ತಳೂರು ವಂದಿಸಿದರು. ನಿರೂಪಕ ಹರ್ಷಿತ್ ಮಿತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.
ಮೊದಲ ದಿನ ನಡೆದ ಕಾರ್ಯಾಗಾರದಲ್ಲಿ ಮೈಮ್ ರಾಮ್ ದಾಸ್, ಮಲ್ಲಿಕಾ ಜ್ಯೋತಿಗುಡ್ಡೆ, ಕೃಷ್ಣಪ್ಪ ಬಂಬಿಲ ತರಬೇತಿ ನೀಡಿದರು.
ಅಭಿನಯ ಕೌಶಲ್ಯದಿಂದ ಮಗುವಿನ ಮನಸ್ಸು ಗೆಲ್ಲಲು ಸಾಧ್ಯ:ಶಶಿಕಲಾ ಹೆಗ್ಡೆ
ಎರಡನೇ ದಿನದ ರಂಗ ಚಟುವಟಿಕೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾರ್ಕಳದ ವರ್ಧಮಾನ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶಶಿಕಲಾ ಹೆಗ್ಡೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಪೂರ್ವ ಪ್ರಾಥಮಿಕ ಶಿಕ್ಷಕರಲ್ಲಿ ಅಭಿನಯ ಕೌಶಲ್ಯವಿದ್ದಾಗ ಮಾತ್ರ ಮಗುವಿನ ಮನಸ್ಸು ಗೆಲ್ಲುಲು ಸಾಧ್ಯ ಎಂದು ಹೇಳಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಳ್ಳಾರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಮಾಣ ಪತ್ರ ವಿತರಿಸಿದರು. ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ, ಉಪನ್ಯಾಸಕರುಗಳಾದ ಯೋಗೀಶ್ ತಳೂರು, ಗೀತಾ ಬಾಲಚಂದ್ರ, ಲೋಕೇಶ್ ಮಠತ್ತಡ್ಕ, ಸಿಂಚನಾ ಕೆ ಪಿ, ಯಶಸ್ವಿನಿ ಉಪಸ್ಥಿತರಿದ್ದರು. ನಿರ್ದೇಶಕ ಉಮೇಶ್ ಮಣಿಕ್ಕಾರ ವಂದಿಸಿದರು. ಉಪನ್ಯಾಸಕಿ ವಿಜಿತಾ ಮತ್ತು ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು.










