ಅಮರಪಡ್ನೂರು: ಜೋಗಿಯಡ್ಕ ಗಲಾಟೆ ಪ್ರಕರಣ

0

ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಅಮರಪಡ್ನೂರು ಗ್ರಾಮದ ಜೋಗಿಯಡ್ಕ ಎಂಬಲ್ಲಿ 2019 ರಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿಗಳಾದ ಪದ್ಮನಾಭ ಮತ್ತು ವರ್ಷಿತ್ ರವರು ದೋಷಿಯೆಂದು ಸಾಬೀತಾಗಿ ಶಿಕ್ಷೆ ಪ್ರಕಟಗೊಂಡಿದೆ.

ರಾಧಾಕೃಷ್ಣ ರವರು ಮೋಟಾರು ಸೈಕಲಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ಪದ್ಮನಾಭ ಮತ್ತು ವರ್ಷಿತ್ ರವರು ರಾಧಾಕೃಷ್ಣ ರವರಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಲ್ಲದೇ, ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದು ಜೀವ ಬೆದರಿಕೆಯನ್ನೊಡ್ಡಿರುವ ಅಪರಾಧದ ಹಿನ್ನಲೆಯಲ್ಲಿ
ಪ್ರಕರಣದ ವಿಚಾರಣೆ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾದ ಕು.ಅರ್ಪಿತಾ ರವರ ಸಮಕ್ಷಮದಲ್ಲಿನ.28 ರಂದು ನಡೆದು ಅಪರಾಧ ಸಾಬೀತಾಗಿ ದೋಷಿಗಳೆಂದು ಎಂದು ತೀರ್ಪು ನೀಡಿದೆ.

ಭಾರತೀಯ ದಂಡ ಸಂಹಿತೆ ಕಲಂ 341 ರಡಿಯಲ್ಲಿ 20 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ 200 ದಂಡ, ಕಲಂ 504 ರಡಿಯಲ್ಲಿ 2 ತಿಂಗಳ ಸಾದಾ ಕಾರಾಗೃಹ‌ ಶಿಕ್ಷೆ ಮತ್ತು ರೂ 500 ದಂಡ, 323 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.400 ದಂಡ, ಕಲಂ 325 ರಡಿಯಲ್ಲಿ 3 ತಿಂಗಳ ಕಾರಾಗೃಹ ಶಿಕ್ಷೆ ಮತ್ತು 3000 ದಂಡ, ಕಲಂ 506 ರಡಿಯಲ್ಲಿ 2 ತಿಂಗಳ ಕಾರಾಗೃಹ ಶಿಕ್ಷೆ ಮತ್ತು 500 ದಂಡ ವಿಧಿಸಿರುವುದಾಗಿ ತಿಳಿದು ಬಂದಿದೆ.

ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದು, ಪ್ರಕರಣದ ತನಿಖೆಯನ್ನು ಎಸ್ ಐ ಈರಯ್ಯ , ಎ. ಎಸ್. ಐ ಸುಧಾಕರ ರವರು ನಡೆಸಿರುತ್ತಾರೆ.