
ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ಭವ್ಯವಾಗಿ ನ.26 ರಂದು ನಡೆಸಲಾಯಿತು.















ಈ ಕಾರ್ಯಕ್ರಮದಲ್ಲಿ ಪದವು ರಸ್ತೆಯಿಂದ ಕುಕ್ಕುಜಡ್ಕದವರೆಗೆ ರಸ್ತೆ ಬದಿಯಲ್ಲಿ ಇರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಕಸಕಡ್ಡಿಗಳನ್ನು ಸಂಗ್ರಹಿಸಲಾಯಿತು. ಜೊತೆಗೆ ರಸ್ತೆ ಬದಿಯ ಹುಲ್ಲುಗಳನ್ನು ಹೆರೆದು ಸ್ವಚ್ಛ ಮಾಡಲಾಯಿತು.
ಕಾರ್ಯಕ್ರಮಕ್ಕೆ ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಅವರು ಚಾಲನೆ ನೀಡಿ, ಸ್ವಚ್ಛತಾ ಕಾರ್ಯದ ಮಹತ್ವವನ್ನು ಸಾರುವಂತೆ ಪ್ರಶಂಸಾ ಮಾತುಗಳನ್ನಾಡಿದರು.
ಯುವತಿ ಮಂಡಲದ ಸ್ಥಾಪಕಾಧ್ಯಕ್ಷೆ ಶ್ರೀಮತಿ ಉಷಾಲತಾ ಪಡ್ಪು, ಅಧ್ಯಕ್ಷರು ಹೇಮಾವತಿ ತಂಟೆಪ್ಪಾಡಿ ಹಾಗೂ ಎಲ್ಲಾ ಪದಾಧಿಕಾರಿಗಳು, ಭಾಗವಹಿಸಿದ್ದರು.










