ಕೆವಿಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

0

ಡಿ. 04 ರಂದು ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ್ ಕಾಲೇಜು ವಲಯ ಮಟ್ಟದ ಕ್ರೀಡಾ ಕೂಟ ಮತ್ತು ಆಯ್ಕೆ ಹಂತ 2025ರಲ್ಲಿ ಕೆವಿಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ವಿವಿಧ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ವ್ಯನ್ಯಶ್ರೀ ಕೆ.ಎಚ್ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ರಕ್ಷಿತ್ ಕುಮಾರ್ ಐ.ಪಿ ತೃತೀಯ ಸ್ಥಾನ, ವಿಜೇತ್ ರಾಜ್ ಚತುರ್ಥ ಸ್ಥಾನ ಗಳಿಸಿದರು. 200 ಮೀಟರ್ ಓಟದಲ್ಲಿ ವ್ಯನ್ಯಶ್ರೀ ಕೆ.ಎಚ್ ದ್ವಿತೀಯ ಸ್ಥಾನ, ರಕ್ಷಿತ್ ಕುಮಾರ್ ಐ.ಪಿ ತೃತೀಯ ಸ್ಥಾನ ಪಡೆಡದಿರುತ್ತಾರೆ.
400 ಮೀಟರ್ ಓಟದಲ್ಲಿ ಹೇಮಂತ್ ಸೋಮಯ್ಯ ಚತುರ್ಥ ಸ್ಥಾನ ಪಡೆದಿರುತ್ತಾರೆ.
5000 ಮೀಟರ್ ವಿಭಾಗದಲ್ಲಿ ಶರಣ್ಯಾ ಎಂ.ಕೆ ದ್ವಿತೀಯ ಸ್ಥಾನ, ಉಮ್ಮರ್ ಮುಕ್ತಾರ್ ಚತುರ್ಥ ಸ್ಥಾನ ಗಳಿಸಿದರು. 800 ಮೀಟರ್‌ನಲ್ಲಿ ವಿದ್ಯಾಶ್ರೀ ರೈ ಮತ್ತು 1500 ಮೀಟರ್‌ನಲ್ಲಿ ಶರಣ್ಯಾ ಎಂ.ಕೆ ತಲಾ 4ನೇ ಸ್ಥಾನ ಪಡೆದರು. ತ್ರಿವಳಿ ಜಿಗಿತದಲ್ಲಿ ಬ್ರಿಜೇಶ್ ಎಮ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಹುಡುಗಿಯರ 4 × 100 ಮೀಟರ್ ರಿಲೇ ಮತ್ತು ಹುಡುಗರ 4 × 100 ಮೀಟರ್ ರಿಲೇ ತಂಡಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ರಮ್ಯಾ ಕೆ.ಎಂ ಜಾವೆಲಿನ್ ತ್ರೋದಲ್ಲಿ ತೃತೀಯ ಸ್ಥಾನ, ನಫೀಸತ್ ಇಷ್ಮಾ ಶಾಟ್ ಪುಟ್ ಮತ್ತು ಡಿಸ್ಕಸ್ ತ್ರೋಗಳಲ್ಲಿ ಚತುರ್ಥ ಸ್ಥಾನ ಗಳಿಸಿರುತ್ತಾರೆ.

ಈ ಮಹತ್ವದ ಸಾಧನೆಗಳಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾoಶುಪಾಲರು ಹಾಗೂ ಸಿಬ್ಬಂದಿ ವರ್ಗ ಎಲ್ಲಾ ವಿಜೇತರು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.