
ಆಲೆಟ್ಟಿ ಗುಂಡ್ಯ ಶ್ರೀ ವಯನಾಟ್ ಕುಲವನ್
ದೈವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಪುದಿಯೋಡ್ಕಲ್ (ಮರೋಟ್) ಕಾರ್ಯಕ್ರಮ ವು ಡಿ. 4 ರಂದು ನಡೆಯಿತು.
















ರಾತ್ರಿ ವಿಷ್ಣುಮೂರ್ತಿ ಮತ್ತು ವಯನಾಟ್ ಕುಲವನ್
ದೈವದ ಪಾತ್ರಿಯವರ ನೇತೃತ್ವದಲ್ಲಿ ದರ್ಶನ ಸೇವೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಯಿತು. ಈ ಸಂದರ್ಭದಲ್ಲಿ
ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವರಾಮ ರೈ ಗುಂಡ್ಯ,ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಹಾಗೂ ಭಾರತೀಯ ತೀಯ ಸಮಾಜ ಬಾಂಧವರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ತೀಯ ಸಮಾಜದ ಕರ್ಮಿಗಳು
ಸಹಕರಿಸಿದರು.










