ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘದ ಸದಸ್ಯರಿಂದ ಪ್ರಯಾಣಿಕರ ತಂಗುದಾಣ ಸ್ವಚ್ಛತೆ

0

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘ ಸುಳ್ಯ ಇದರ ವತಿಯಿಂದ ಸುಳ್ಯದ ಜ್ಯೋತಿ ವೃತ್ತದ ಬಳಿ ಇರುವ ಪ್ರಯಾಣಿಕರ ತಂಗುದಾಣದ ಸ್ವಚ್ಛತಾ ಕಾರ್ಯ ಶ್ರಮದಾನದ ಮೂಲಕ ಡಿ. ೫ರಂದು ನಡೆಯಿತು.

ಸಂಘಟನೆಯ ಸುಮಾರು ೧೫ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ತಂಗುದಾಣದ ಬಳಿ ಇದ್ದ ಕಾಡು ಪೊದೆಗಳ ತೆರವು ಕಾರ್ಯ, ಗೋಡೆಗಳ ಸ್ವಚ್ಛತಾ ಕಾರ್ಯ, ಬಣ್ಣ ಬಳಿಯುವ ಕೆಲಸ ಕಾರ್ಯಗಳು ಶ್ರಮದಾನ ಮೂಲಕ ನಡೆಸಿದರು.

ಸ್ವಚ್ಛತಾ ಕಾರ್ಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘದ ಸದಸ್ಯರುಗಳಾದ ನಂದ ಕುಮಾರ್, ಪುನೀತ್, ಮನ್ವಿತ್, ಕು.ಚಲನಾ, ದೀಕ್ಷಿತ್, ಪುನೀತ್, ದೀಪಕ್, ಶ್ರಾವ್ಯ, ವಿಸೃತ, ಕೃಪಾಲಯ, ತೇಜಸ್, ಮೋನಿಶ್, ಪವನ್ ಮೊದಲಾದವರು ಭಾಗವಹಿಸಿದ್ದರು.

ಎನ್‌ಎಸ್‌ಎಸ್ ಸೇವಾ ಸಂಘದ ಸದಸ್ಯ ಸುಜಿತ್ ರವರು ಬಣ್ಣವನ್ನು ನೀಡಿ ಸಹಕರಿಸಿದರು.