ಏನೆಕಲ್ಲಿನ ರಾಯಲ್ ಮೊಂಟೇನಾ ದ ಹೋಟೇಲ್ ಮ್ಯಾನೇಜರ್ ಲಕ್ಷಾಂತರ ಹಣವನ್ನು ವಂಚಿಸಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.















ಈ ಬಗ್ಗೆ ಮರದೇವಪುರದ ಅಶೋಕ್ ಕುಮಾರ್ ಎಸ್.ಎನ್. (೫೧) ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ಅಶೋಕ್ ಅವರು ರಾಯಲ್ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದು, ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಡಿ.ಇ. ರಾಯಲ್ ಮೋಂಟಾನಾ ಹೋಟೇಲ್ ಮತ್ತು ರೆಸಾರ್ಟ್ ಇವರದ್ದೆ ಸಂಸ್ಥೆಯಾಗಿದ್ದು, ಏನೆಕಲ್ಲಿನ ಹೋಟೇಲ್‌ಮತ್ತು ರೆಸ್ಟೋರೆಂಟ್ 2024ರ ಫೆಬ್ರವರಿ 28 ರಂದು ಪ್ರೇಮ್‌ಚಂದ್ ಸಿ. ಎಂಬವರನ್ನು ಮ್ಯಾನೇಜರ್ ಆಗಿ ವ್ಯವಹಾರ ಮತ್ತು ನಿರ್ವಹಣೆ ಮಾಡಲು ನೇಮಕ ಮಾಡಲಾಗಿತ್ತು. ಪ್ರೇಮ್‌ಚಂದ್ ಹೋಟೇಲ್ ಮತ್ತು ರೆಸಾರ್ಟ್ ವ್ಯವಹಾರವನ್ನು ಮತ್ತು ನಿರ್ವಹಣೆಯ ಜವಾಬ್ದಾರಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರೂಂ ಬುಕ್ ಮಾಡುವ ಗ್ರಾಹಕರಿಂದ ಪ್ರೇಮ್‌ಚಂದ್ ತನ್ನ ವಯಕ್ತಿಕ ಯು.ಪಿ.ಐ.ಡಿ.ನ್ನು ನೀಡಿ ಗ್ರಾಹಕರಿಂದ ಹಣವನ್ನು ಪಡೆದು ಕಂಪನಿಗೆ ಮೋಸ ಮಾಡಿದ್ದು, ಹಾಗೂ ಗ್ರಾಹಕರು ರೂಂ ಬುಕ್ ಮಾಡಲು ಬರುವ ವೇಳೆ ಹೋಟೇಲ್‌ನ ರಿಸೆಪ್ಷನ್‌ನಲ್ಲಿ ತನದೇ ಯುಇಪಿಐಡಿ ಹೊಂದಿರುವ ಸ್ಕ್ಯಾನರ್‌ನ್ನು ತೋರಿಸಿ ತನ್ನದೇ ಯುಪಿಐಡಿ ಸ್ಕಾನರ್ ಗೆ ಗ್ರಾಹಕರಿಂದ ಹಣ ಪಡೆದಿರುತ್ತಾರೆ.
ಮತ್ತು ಗ್ರಾಹಕರಿಂದ ಯುಪಿಐಡಿಗೆ ಮೂಲಕ ಹಣ ವರ್ಗಾವಣೆಯಾಗದೇ ಇದ್ದಾಗ ಅವರಿಂದ ನಗದು ರೂಪದಲ್ಲಿ ಹಣವನ್ನು ಪಡೆದು ಆ ಹಣವನ್ನು ಕಂಪನಿಯ ಖಾತೆಗೆ ಜಮಾ ಮಾಡದೇ ತಾನೆ ಹಣವನ್ನು ವಯಕ್ತಿಕ ವಿಚಾರಗಳಿಗೆ ಬಳಸಿಕೊಂಡಿರುವ ಬಗ್ಗೆ ಆರೋಪಿಸಲಾಗಿದ್ದು, ಕೆಲಸಕ್ಕೆ ಸೇರಿದ ದಿನದಿಂದ ಇಲ್ಲಿಯ ತನಕ ಎಲ್ಲಾ ರೀತಿಯ ಹಣದ ವ್ಯವಹಾರವನ್ನು ಇಲ್ಲಿನ ಸಹೋದ್ಯೋಗಿಗಳ ಜೊತೆ ಸೇರಿಕೊಂಡು ಕಂಪನಿಗೆ ಸುಮಾರು ರೂ. 47,67,166 ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ಸುಬ್ರಹ್ಮಣ್ಯ ಪೊಲೀಸಸ್ ಠಾಣೆಗೆ ದೂರು ನೀಡಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



