ಮಂಡೆಕೋಲಿನಲ್ಲಿ ದಾಸ ಸಂಕೀರ್ತನೆ ಉದ್ಘಾಟನೆ

0

ಅಂತರ್ ಜಿಲ್ಲಾ ಮಟ್ಟದ ಕುಣಿತ ಸ್ಪರ್ಧಾ‌ ಕಾರ್ಯಕ್ರಮ

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಅಜ್ಜಾವರ ವಲಯ, ತತ್ವಮಸಿ ಗ್ರೂಪ್ ಮಂಡೆಕೋಲು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಶ್ರೀ ಶಬರಿಗಿರಿ ಸೇವಾ ಪ್ರತಿಷ್ಠಾನ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮಂಡೆಕೋಲು ಇವುಗಳ ಸಹಕಾರದೊಂದಿಗೆ ಅಂತರ್ ಜಿಲ್ಲಾ ಮಟ್ಟದ ದಾಸ ಸಂಕೀರ್ತನ ಕುಣಿತ ಭಜನಾ ಸ್ಪರ್ಧೆ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಕುಂಟಾರು ರವೀಶ ತಂತ್ರಿಗಳು ಆಶೀರ್ವಚನ ನೀಡಿದರು. “ಭಕ್ತಿ ಮಾರ್ಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಭಜನೆಯಿಂದ ಸಾಧ್ಯ. ಭಜನೆ ಸಮಾಜದ ಅವಿಭಾಜ್ಯ ಅಂಗವಾಗಿ ಮಾಡುವಲ್ಲಿ ಧರ್ಮಸ್ಥಳ ಯೋಜನೆ ಭಜನಾ ಕಮ್ಮಟ ದೊಡ್ಡ ಕೆಲಸ ಮಾಡಿದೆ. ನಮ್ಮ ಎಲ್ಲರ ಮನೆಗಳಲ್ಲಿ, ಧಾರ್ಮಿಕ‌ ಕ್ಷೇತ್ರಗಳಲ್ಲಿ ಭಜನೆ ನಿರಂತರವಾಗಿ ಇದೇ ರೀತಿ‌ ನಡೆಯುತ್ತಿರಲೆಂದು‌ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ದಾಸ ಸಂಕೀರ್ತನೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿದರು “ದೇವರನ್ನು ಒಲಿಸಿಕೊಳ್ಳಲು ಸುಲಭ ಸಾಧನ ಭಜನೆ. ಈ ರೀತಿಯ ಕಾರ್ಯ ನಮ್ಮೆಲ್ಲ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿರಬೇಕು. ಇದರಿಂದ ಧಾರ್ಮಿಕ ಪ್ರಜ್ಞೆ ಮತ್ತಷ್ಟು ಜಾಗೃತಿಗೊಳ್ಳುತ್ತದೆ” ಎಂದರು.

ತತ್ವಮಸಿ ಗ್ರೂಪ್ ನ ಸಂಚಾಲಕರು‌ ಹಾಗೂ ದಾಸ ಸಂಕೀರ್ತನೆ ಸಂಘಟನೆಯ ಪ್ರಮುಖರಾದ ಪ್ರಕಾಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು.

ಕುಣಿತ ಭಜನಾ ಸ್ಪರ್ಧೆಯನ್ನು ಹಿರಿಯ ವೈದ್ಯರಾದ ಡಾ.ಅನಂತ ಪದ್ಮನಾಭ ಭಟ್ ಎರ್ಕಲ್ಪಾಡಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ಮುಖ್ಯ ಅತಿಥಿಗಳಾಗಿದ್ದರು.

ಕೋಲ್ಚಾರು ಶಾಲೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ‌ಕೆ.ಡಿ.ಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ನಾರಾಯಣ ವೇದಿಕೆಯಲ್ಲಿ ಇದ್ದರು.

ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಸ್ವಾಗತಿಸಿದರು. ‌ಶ್ರೀಮತಿ ಸಾವಿತ್ರಿ ಕಣೆಮರಡ್ಕ ಸನ್ಮಾನಿತರನ್ನು ಪರಿಚಯಿಸಿದರು. ಉದಯಭಾಸ್ಕರ್ ಸುಳ್ಯ ‌ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ಉಗ್ರಾಣಿಮನೆ ವಂದಿಸಿದರು.