Home Uncategorized ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ನೇತೃತ್ವದ ತಂಡದ ಪದಗ್ರಹಣ ಸಮಾರಂಭ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ನೇತೃತ್ವದ ತಂಡದ ಪದಗ್ರಹಣ ಸಮಾರಂಭ

0

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ನೂತನ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಪ್ರಧಾನ ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಕೋಶಾಧಿಕಾರಿ ಅನಿಲ್ ಕಳಂಜ ತಂಡದ ಪದಗ್ರಹಣ ಸಮಾರಂಭ ಡಿ.11ರಂದು ಸುಳ್ಯದ ರಂಗ ಮಯೂರಿ‌ ಕಲಾ ಶಾಲೆಯಲ್ಲಿ ನಡೆಯಿತು.

ತಾಲೂಕು ಸಂಘದ ಅಧ್ಯಕ್ಷೆ ಶ್ರೀಮತಿ ‌ಜಯಶ್ರೀ‌ ಕೊಯಿಂಗೋಡಿಯವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ ಕಾರ್ಯಕ್ರಮ ಉದ್ಘಾಟಿಸಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ರವರು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ತಂಡದ ಪದಗ್ರಹಣ ನೆರವೇರಿಸಿದರು. ಬಳಿಕ ಯಶ್ವಿತ್ ಕಾಳಮ್ಮನೆಯವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು.

ವೇದಿಕೆಯಲ್ಲಿ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಈಶ್ವರ ವಾರಣಾಸಿ, ಪ್ರಧಾನ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಪುಣಚ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ‌ಜಟ್ಟಿಪಳ್ಳ, ರಂಗಮಯೂರಿ‌ ಕಲಾ ಶಾಲೆಯ ನಿರ್ದೇಶಕ‌ ಲೋಕೇಶ್ ಊರುಬೈಲು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ‌ಘಟಕದ ಅಧ್ಯಕ್ಷ ರಾಮದಾಸ್ ವೇದಿಕೆಯಲ್ಲಿ ಇದ್ದರು.

ಗೌರವ : ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಈಶ್ವರ ವಾರಣಾಸಿಯವರನ್ನು ಸುಳ್ಯ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕು ಘಟಕದ ಮಾಜಿ ಕಾರ್ಯದರ್ಶಿ ರಮೇಶ್ ನೀರಬಿದಿರೆ ಸ್ವಾಗತಿಸಿದರು. ನೂತನ ಕೋಶಾಧಿಕಾರಿ ಅನಿಲ್ ಕಳಂಜ ವಂದಿಸಿದರು. ತಾಲೂಕು ಘಟಕದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ‌ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking