













ಬೆಂಗಳೂರಿನ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಕ್ಕಲಿಗ ಸಮಾಜದ ಅಪ್ರತಿಮ ಸಾಧಕರಿಗೆ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದರು ಭಾಜನರಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಡಿ.14 ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಿತು.
ಡಾ. ಯು.ಪಿ.ಶಿವಾನಂದರ ಪರವಾಗಿ ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ, ಸುದ್ದಿ ಪ್ರತಿನಿಧಿ ದಿನೇಶ್ ಹಾಲೆಮಜಲುರವರು ಪ್ರಶಸ್ತಿ ಸ್ವೀಕರಿಸಿದರು.







