ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಿದ ಸಂಘಟಕರು
ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುಕ್ಕುಜಡ್ಕದಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾದ ಕೆ.ಆರ್.ತೇಜಕುಮಾರ್ ಬಡ್ಡಡ್ಕರವರ ಮನೆಗೆ ಸಂಘಟಕರು ತೆರಳಿ ಅಧಿಕೃತ ಆಹ್ವಾನ ನೀಡಿದರು.














ಡಿ.17ರಂದು ಬಡ್ಡಡ್ಕದಲ್ಲಿರುವ ತೇಜಕುಮಾರ್ ರವರ ಮನೆಗೆ ತೆರಳಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ನೀಡಿ ದಂಪತಿಗಳನ್ನು ಶಾಲು, ಹಾರ ಹಾಕಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಾಡಬಾಕಿಲು, ಕಸಾಪ ಗೌ.ಕಾರ್ಯದರ್ಶಿ ಚಂದ್ರಾವತಿ ಕೆ.,ಗೌ.ಕೋಶಾಧಿಕಾರಿ ದಯಾನಂದ ಆಳ್ವ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕಸಾಪ ನಿರ್ದೇಶಕರುಗಳಾದ ಸಂಕೀರ್ಣ ಚೊಕ್ಕಾಡಿ, ಲತಾ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್ , ಸಾಹಿತಿ ವಿದ್ಯಾಧರ ಬಡ್ಡಡ್ಕ, ಶ್ರೀಮತಿ ಲತಾ ವಿದ್ಯಾಧರ ಮೊದಲಾದವರು ಉಪಸ್ಥಿತರಿದ್ದರು.







