ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪೂರ್ವಭಾವಿ ಸಭೆ

0

ಜಾತ್ರೋತ್ಸವ ಸಮಿತಿ ರಚನೆ- ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಬೈತಡ್ಕ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ
ಜಾತ್ರೋತ್ಸವದ ಪೂರ್ವಭಾವಿ ಸಭೆ ಡಿ. 21 ರಂದು ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.

ವ್ಯವಸ್ಥಾಪನ ಸಮಿತಿಯ
ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಜೀರ್ಣೋದ್ಧಾರ ಸಮಿತಿಯ
ಅಧ್ಯಕ್ಷ ಸುಧಾಕರ ಕಾಮತ್, ಉತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ರೈ ಕುಕ್ಕಂದೂರು, ಮೊಕ್ತೆಸರ ಗುರುರಾಜ್ ಭಟ್ ಅಡ್ಕಾರು, ವ್ಯ. ಸಮಿತಿಯ ಮಾಜಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀವರ ಪಾಂಗಣ್ಣಾಯ, ಉತ್ಸವ ಸಮಿತಿಯ ಪದಾಧಿಕಾರಿಗಳಾದ ಗೋಪಾಲ ಪದವು, ಆತ್ಮರಾಮ ಗಬಲಡ್ಕ, ವಿಜಯ್ ಕೋಡ್ತಿಲು, ಬಾಲಕೃಷ್ಣ ಮಣಿಯಾಣಿ, ಕಚೇರಿ ನಿರ್ವಾಹಕ ಹರ್ಷಿತ್ ಪೇರಾಲ್ ಉಪಸ್ಥಿತರಿದ್ದರು.

ವ್ಯ. ಸಮಿತಿಯ ಸದಸ್ಯರು,
ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಉತ್ಸವ ಸಮಿತಿಯ ಸದಸ್ಯರು, ಬೈಲುವಾರು ಸಮಿತಿ ಹಾಗೂ ಮಹಿಳಾ ಸಮಿತಿಯ ಸರ್ವ ಸದಸ್ಯರು, ಭಗವತ್ ಭಕ್ತರು ಭಾಗವಹಿಸಿ ಸೂಕ್ತ ಸಲಹೆ ನೀಡಿದರು.

ಜಾತ್ರೋತ್ಸವ ಸಮಿತಿ ರಚನೆ

ಇದೇ ಸಂದರ್ಭ ನೂತನವಾಗಿ ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಬೈತಡ್ಕ, ಪ್ರಧಾನ ಕಾರ್ಯದರ್ಶಿಗಳಾಗಿ ಧನುಷ್ ಕುಕ್ಕೆಟ್ಟಿ, ವೇದಾ ಶೆಟ್ಟಿ ಬೊಳುಬೈಲು, ಸುಕೇಶ್ ಪದವು, ಚಂದ್ರಕುಮಾರ ಕಾಳಮ್ಮನೆ, ಖಜಾಂಜಿಯಾಗಿ ಗೋಪಾಲ ಕಾನರವರನ್ನು ಆಯ್ಕೆ ಮಾಡಲಾಯಿತು.