ರಸ್ತೆ ಮಧ್ಯೆ ಇರುವ
ಗುಂಡಿಯೇ ಅಪಘಾತಕ್ಕೆ ಕಾರಣವಾಯಿತೇ…














ಸುಳ್ಯ ಗಾಂಧಿನಗರದಿಂದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಅಟೋ ರಿಕ್ಷಾ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ಖಾಸಗಿ ಬಸ್ ನಿಲ್ದಾಣದ ಬಳಿಯ ಅಟೋ ನಿಲ್ದಾಣದ ಪಾರ್ಕಿಂಗ್ ನಲ್ಲಿ ನಿಲ್ಲಿಸುತ್ತಿದ್ದ ಆನಂದ ಎಂಬವರಿಗೆ ಸೇರಿದ ಅಟೋ ರಿಕ್ಷಾ ನಾಗಪಟ್ಟಣ ಕಡೆಗೆ ಸಂಚರಿಸುತ್ತಿದ್ದಾಗ ಗುರುಂಪು ಎಂಬಲ್ಲಿ ರಸ್ತೆ ಮಧ್ಯೆ ಇರುವ ಗುಂಡಿಯನ್ನು ತಪ್ಪಿಸುವ ಕಾರಣದಿಂದ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಬಲಬದಿಯತ್ತ ಬರುವುದನ್ನು ಗಮನಿಸಿದ ರಿಕ್ಷಾ ಚಾಲಕ ಎಡಬದಿಗೆ ತಿರುಗಿಸಿದಾಗ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಪಲ್ಟಿಯಾಯಿತು.

ರಸ್ತೆ ಮಧ್ಯೆ ಇರುವ ಪೈಪ್
ಲೈನ್ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ ಹಾಗೆ ಬಿಟ್ಟಿರುವುದೇ ಅಪಘಾತಕ್ಕೆಕಾರಣವಾಯಿತು ಎಂದು ಸ್ಥಳೀಯರು ದೂರಿಕೊಂಡರು.
ರಿಕ್ಷಾದಲ್ಲಿಮಹಿಳೆಯೋರ್ವರು ಮಾತ್ರ ಇದ್ದು ಗಾಯಗೊಂಡ ಅವರನ್ನು ತಕ್ಷಣ ಸೇರಿದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಚಾಲಕ ಆನಂದ ರವರು ಅಲ್ಪ ಸ್ವಲ್ಪ ಗಾಯಗೊಂಡಿರುತ್ತಾರೆ. ಅಟೋರಿಕ್ಷಾಜಖಂಗೊಂಡಿದೆ
ಸ್ಥಳೀಯರು ರಿಕ್ಷಾವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದರು.







