ಮಂಡೆಕೋಲು: ಎಂ.ಟಿ.ಶಿವಪ್ರಸಾದ್‌ರವರ ಪತ್ನಿ ಶ್ರೀಮತಿ ಸವಿತಾ ಹೃದಯಾಘಾತದಿಂದ ನಿಧನ

0

ಮಂಡೆಕೋಲು ಗ್ರಾಮದ ಹಿರಿಯ ಕೃಷಿಕರಾದ ಎಂ.ಟಿ.ಗೌಡರ ಪುತ್ರ ಶಿವಪ್ರಸಾದ್ ಎಂ.ಡಿ.ಯವರ ಪತ್ನಿ ಶ್ರೀಮತಿ ಸವಿತಾ ಶಿವಪ್ರಸಾದ್‌ರವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಬೆಂಗಳೂರಿನ ಮನೆಯಲ್ಲಿ ನಿಧನರಾಗಿರುವುದಾಗಿ ತಿಳಿದುಬಂದಿದೆ.
ಅವರಿಗೆ ಸುಮಾರು 49 ವರ್ಷ ವಯಸ್ಸಾಗಿತ್ತು.


ಸವಿತಾರವರಿಗೆ ಕೆಲ ದಿನಗಳ ಮೊದಲು ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿದಾಗ ಬ್ಲಾಕ್ ಇರುವುದು ಗೊತ್ತಾಗಿ ಸ್ಟಂಟ್ ಅಳವಡಿಸಿ ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೆಂಗಳೂರಿನ ನಾಗರಬಾವಿಯಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದರು. ಇಂದು ಬೆಳಿಗ್ಗೆ ಚಹಾ ಕುಡಿಯುತ್ತಿರುವಾಗ ತೀವ್ರ ಹೃದಯಾಘಾತವಾಯಿತೆಂದೂ ಪರಿಣಾಮವಾಗಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.


ಮೃತರು ಪರಿ ಶಿವಪ್ರಸಾದ್ ಎಂ.ಟಿ., ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತದೇಹವನ್ನು ಮಂಡೆಕೋಲಿನ ಮನೆಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.