ಅಜ್ಜಾವರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ ಮತ್ತು ಮೇದಿನಡ್ಕ ಸಂಘಸಂಸ್ಥೆಗಳ ಸಹಯೋಗದಲ್ಲಿ ಜ.4ರಂದು ಮೇದಿನಡ್ಕದಲ್ಲಿ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮತ್ತು ಬೀದಿನಾಟಕ ಪ್ರದರ್ಶನ ನಡೆಯಿತು.














ಈ ಸಂದರ್ಭದಲ್ಲಿ ಆರೀಗ್ಯ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೀಳಾ , ಅಜ್ಜಾವರ ಸಮುದಾಯ ಆರೋಗ್ಯ ಅಧಿಕಾರಿ ಜಯಶೀಲ, ಕಾಂತಮಂಗಲ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಾಲಿನಿ
ಆಶಾ ಕಾರ್ಯಕರ್ತೆಯಾರದ ಜಯಶ್ರೀ, ಗೀತಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇಲಾಖೆ ವತಿಯಿಂದ ಆರೋಗ್ಯ ಸುರಕ್ಷಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ನಡೆಯಿತು, ಅಲ್ಲದೆ ಪರಿಸರ ಸಂರಕ್ಷಣೆ, ಸ್ವಚ್ಛತೆ ನೀರಿನ ನೈರ್ಮಲ್ಯದ ಬಗ್ಗೆಯು ಮಾಹಿತಿ ನೀಡಲಾಯಿತು.


ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯಂ, ಸಹಾಯಕಿ ಧನ್ಯಶ್ರೀ, ಗ್ರಾಮ ಪಂಚಾಯತ್ ಸದಸ್ಯೆ ದಿವ್ಯಾ ಪಡ್ಡಂ ಬೈಲ್ , ಶಿಕ್ಷಕ ಯೋಗನಾಥ್ ಮೇದಿನಡ್ಕ, ಶ್ರವಣ್ ಮೇದಿನಡ್ಕ, ಸಂತೋಷ್, ವಿನೀತ್,ರಾಜೇಶೇಖರ್, ಸಂಜಯ್ ಸೇರಿದಂತೆ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಪದಾಧಿಕಾರಿಗಳು ಹಾಗೂ ಮೇದಿನಡ್ಕದ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ದಯಾಳ್ ಮೇದಿನಡ್ಕ ಸ್ವಾಗತಿಸಿ, ವಿನೋದನ್ ಧನ್ಯವಾದ ಸಮರ್ಪಿಸಿದರು. ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು.







