ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.














ಕೆಲ ಸಮಯದಿಂದ ವಯೋ ಸಹಜ ಅಸೌಖ್ಯತೆಯಿಂದಿದ್ದ ಕಮಲಾಕ್ಷಿ ಟೀಚರ್ ರವರು ಚೆನ್ನಕೇಶವ ದೇವಸ್ಥಾನದ ಬಳಿ ತಮ್ಮ ಮನೆಯಲ್ಲಿ ಇದ್ದರು. ನಿನ್ನೆ ತೀವ್ರ ಅಸ್ವಸ್ಥಗೊಂಡಾಗ ಅವರನ್ನು ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಮುಂಜಾನೆ ಅವರು ನಿಧನರಾದರು.
ದೇವಸ್ಥಾನದ ಬಳಿ ಮನೆಯಲ್ಲಿ ಅಂತಿಮ ದರ್ಶನ
ಕಮಲಾಕ್ಷಿ ಟೀಚರ್ ರವರ ಮೃತದೇಹವನ್ನು ದೇವಸ್ಥಾನದ ಬಳಿಯ ಅವರ ನಿವಾಸಕ್ಕೆ ತರಲಾಗುವುದು. ಸಂಜೆ 4 ಗಂಟೆಯ ತನಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರ ಮನೆಯವರು ತಿಳಿಸಿದ್ದಾರೆ.







