ಮಂಡೆಕೋಲಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

0

ಮಂಡೆಕೋಲು ಗ್ರಾಮ ಪಂಚಾಯತ್ ನ 15 ನೇ ಹಣಕಾಸು ಯೋಜನೆಯಲ್ಲಿ ರೂ.1 ಲಕ್ಷ ಹಾಗೂ ಉದ್ಯೋಗ‌ ಖಾತರಿ ಯೋಜನೆಯಲ್ಲಿ ರೂ.2 ಲಕ್ಷ ವೆಚ್ಚದಲ್ಲಿ ಮುರೂರು – ಕಾಪಿನಡ್ಕ ರಸ್ತೆ ಕಾಂಕ್ರೀಟಿಕರಣ ನಡೆಯಲಿದ್ದು ಇದಕ್ಕೆ ಗುದ್ದಲಿಪೂಜೆ ಹಾಗೂ ಮಂಡೆಕೋಲಿನಿಂದ ಕೇನಾಜೆ – ಮೈತಡ್ಕ ರಸ್ತೆ ಅಭಿವೃದ್ಧಿಗೆ ಗ್ರಾ.ಪಂ. ನಿಧಿಯಿಂದ ರೂ.1 ಲಕ್ಷ 60 ಸಾವಿರ ಹಾಗೂ ತಾಲೂಕು ಪಂಚಾಯತ್ ನಿಂದ ರೂ.2 ಲಕ್ಷ ಅನುದಾನ ನೀಡಲಾಗಿದ್ದು ಈ ಎರಡೂ ಕಾಮಗಾರಿ ಗಳ ಗುದ್ದಲಿಪೂಜೆಯು ಜ.7ರಂದು ನಡೆಯಿತು.

ಗ್ರಾ.ಪಂ. ಅಧ್ಯಕ್ಷ ಕುಶಲ ಉದ್ದಂತಡ್ಕ ಹಾಗೂ ಅರೆಭಾಷೆ ಅಕಾಡೆಮಿ‌ ಅಧ್ಯಕ್ಷ ಸದಾನಂದ ಮಾವಜಿಯವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಅನುದಾನ ಒದಗಿಸಿದ ಗ್ರಾ.ಪಂ. 2 ನೇ ವಾರ್ಡ್ ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ರಾಧಿಕ‌ ಮೈತಡ್ಕ, ನವೀನ್ ಮುರೂರು, ಪ್ರಶಾಂತಿ ಬೈಲು, ಮಾಜಿ ಅಧ್ಯಕ್ಷರಾದ ವಿನುತಾ ಪಾತಿಕಲ್ಲು, ಮಾಜಿ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ನಿರ್ದೇಶಕರುಗಳಾದ ಲಕ್ಷ್ಮಣ ಉಗ್ರಾಣಿಮನೆ, ಆಶಿಕ್ ದೇವರಗುಂಡ, ಬಿಜೆಪಿ ಶಕ್ತಿಕೇಂದ್ರ ಮಂಡೆಕೋಲು ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿಮನೆ, ತಾ.ಪಂ. ಮಾಜಿ ಅಧ್ಯಕ್ಷರಾದ ಶಂಕರ ಪೆರಾಜೆ, ಉದಯಕುಮಾರ್ ಆಚಾರ್, ಕೃಷ್ಣಪ್ರಸಾದ್ ಸುಬ್ರಹ್ಮಣ್ಯ ಭಟ್, ರಾಮಚಂದ್ರ ಮಣಿಯಾಣಿ, ರತ್ನಾಕರ ನಾಯಕ್, ಸೂರ್ಯ ನಾರಾಯಣ ಕರೋಡಿ, ರಾಮಕೃಷ್ಣ ನಾಯಕ್, ಪ್ರಖ್ಯಾತ್ ವಾಗ್ಲೆ, ದೀಪಕ್ ದೇವರಗುಂಡ, ಹರಿಶ್ಚಂದ್ರ ಪಿ., ಚಂದ್ರಜಿತ್ ಮಾವಂಜಿ, ಶೇಖರ‌ ಕಣೆಮರಡ್ಕ, ಪ್ರಮೋದ್, ಯತೀಶ್‌ ಕೇನಾಜೆ, ಮನಮೋಹನ ಮೈತಡ್ಕ, ಮತ್ತು ಗುತ್ತಿಗೆದಾರರಾದ ಪ್ರಕಾಶ ಕಣೆಮರಡ್ಕ ಉಪಸ್ಥಿತರಿದ್ದರು.