ಅದ್ದೂರಿಯಾಗಿ ಜರುಗಿದ ಕೆ.ವಿ.ಜಿ ಐ.ಪಿ.ಎಸ್ ನ ಕ್ರೀಡೋತ್ಸವ -‘ ಸ್ಪೋರ್ಟ್ಸ್ ಸ್ಪೆಕ್ಟ್ರಾ’

0

” ಜೀವನದಲ್ಲಿ ಶಿಸ್ತು,ಸಮರ್ಪಣೆ, ಏಕಾಗ್ರತೆ ಮತ್ತು ಶ್ರಮ ಮುಖ್ಯ ” – ಮೈಕೆಲ್ ಸುಸಾಯ್ ರಾಜ್

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡೋತ್ಸವವು ಶಾಲಾ ಮೈದಾನದಲ್ಲಿ ಜನವರಿ 6 ರಂದು ವಿಜೃಂಭಣೆಯಿಂದ ನೆರವೇರಿತು .

ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಹಾಗೂ ಆದಾಯ ತೆರಿಗೆ ನಿರೀಕ್ಷಕರಾಗಿರುವ ಮೈಕಲ್ ಸುಸಾಯ್ ರಾಜ್ ಮಾತನಾಡಿ ” ಜೀವನದಲ್ಲಿ ಶಿಸ್ತು, ಮೌಲ್ಯ, ಸಮರ್ಪಣೆ, ಏಕಾಗ್ರತೆ ಮತ್ತು ಶ್ರಮ ಇವೆಲ್ಲ ಇದ್ದರೆ ನಿಮ್ಮ ಗುರಿಯನ್ನು ಸಾಧಿಸುವಿರಿ ” ಎಂದರು.

ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ. ವಿ ಯವರು ಈ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಎಒಎಲ್ಇ ಕಮಿಟಿ ಬಿ ಕಾರ್ಯದರ್ಶಿಯಾಗಿರುವ ಜ್ಯೋತಿ.ಆರ್. ಪ್ರಸಾದ್ ಮಾತನಾಡಿ ” ಜೀವನದಲ್ಲಿ ಶ್ರಮಪಟ್ಟು ಕೆಲಸವನ್ನು ಮಾಡಿ ಆಗ ನೀವು ನಿಮ್ಮ ಗುರಿಯ ಕಡೆಗೆ ಸಾಗುತ್ತಿರಿ “ಎಂದರು.
ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಮೌರ್ಯ ಆರ್. ಕುರುಂಜಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಅರುಣ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪರವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು.
ಕ್ರೀಡೋತ್ಸವದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು, ಕ್ರೀಡಾ ಮುಂದಾಳುಗಳನ್ನು, 2024 -25 ನೇ ಸಾಲಿನ ಸಿಬಿಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರನ್ನು, 2025- 26ನೇ ಸಾಲಿನಲ್ಲಿ ಪೂರ್ಣ ಹಾಜರಾತಿ ಹೊಂದಿದ ವಿದ್ಯಾರ್ಥಿಗಳನ್ನು, ಅತ್ಯುತ್ತಮ ಹೊರ ಹೋಗುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪೋಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಎಂಟನೇ ತರಗತಿಯ ಸಾನಿಧ್ಯ ಮತ್ತು 7ನೇ ತರಗತಿಯ ಜನ್ಯ ಕ್ರೀಡೋತ್ಸವದ ನಿರೂಪಣೆ ಮಾಡಿದರು. ಸ್ಕಂದ ದಿಯ ಪಿ ಕಲ್ಲಾಜೆ ಸ್ವಾಗತಿಸಿ ಮನ್ವಿತ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ವಿ, ಕೆವಿಜಿ ಅಮರ ಜ್ಯೋತಿ ಪಿ ಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ ಆರ್, ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ದಿನೇಶ್ ಮಡ್ತಿಲ,
ಎ ಒ ಎಲ್ ಇ ಕಮಿಟಿ ಬಿ ಯ ಆಡಳಿತ ನಿರ್ವಹಣಾಧಿಕಾರಿ ಭವಾನಿ ಶಂಕರ ಅಡ್ತಲೆ, ಕೆವಿಜಿ ಡೆಂಟಲ್ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಮಾಧವ ಬಿ ಟಿ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್ ಕುತ್ತ ಮುಟ್ಟೆ, ಪಿ ಎಸ್ ಗಂಗಾಧರ್ , ಎ ಒ ಎಲ್ ಇ ಕಮಿಟಿ ಬಿ ಯ ಆಡಳಿತ ಅಧಿಕಾರಿ ಪ್ರಸನ್ನ ಕಲ್ಲಾಜೆ, ಆಮಂತ್ರಿಸಿದ ಗಣ್ಯರು, ವಿದ್ಯಾಭಿಮಾನಿಗಳು, ಪೋಷಕರು ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.