ಸುಳ್ಯ ಜಾತ್ರೆಯ ಕೋಳಿಅಂಕ ಈ ಬಾರಿ ಇಲ್ಲ

0

ಸುಳ್ಯ ಜಾತ್ರೆ ಕಳೆದ ಬಳಿಕ ಮೂರುದಿನಗಳ ಕಾಲ ನಡೆಯುತ್ತಿದ್ದ ಕೋಳಿಅಂಕ ಈ ಬಾರಿ ನಡೆಯುವುದಿಲ್ಲ.
ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತಿರುವ ಎಸ್.ಪಿ.ಅರುಣ್ ಅವರು ಯಾವುದೇ ಕೋಳಿಅಂಕಕ್ಕೆ ಅನುಮತಿ ನೀಡುತ್ತಿಲ್ಲವಾದ ಹಿನ್ನಲೆಯಲ್ಲಿ ಸುಳ್ಯದಲ್ಲಿ ಕೋಳಿ ಅಂಕ ರದ್ದಾಗಿರುವುದಾಗಿ ತಿಳಿದು ಬಂದಿದೆ.
ಪ್ರತಿ ವರ್ಷ ಸುಳ್ಯ ಜಾತ್ರೆಯ ಕೊಡಿ ಇಳಿದ ಬಳಿಕ ಸಂಕ್ರಮಣದ ಮರುದಿನದಿಂದ ಮೂರು ದಿನ ಬೂಡುವಿನಲ್ಲಿರುವ ವಾಲಸರಿಗದ್ದೆಯ ಪಕ್ಕದ ಗದ್ದೆಯಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಮೂರನೇ ದಿನದ ಬಳಿಕದ ನಾಲ್ಕನೆಯ ದಿನ ಬಿರಿಕಟ್ಟ ನಡೆಯುತ್ತಿತ್ತು. ಸಾವಿರಾರು ಮಂದಿ ಈ ಕೋಳಿಅಂಕದಲ್ಲಿ ಭಾಗವಹಿಸುತ್ತಿದ್ದರು. ಈ ಬಾರಿ ನಡೆಯುವುದಿಲ್ಲವೆಂದು ತಿಳಿದು ಬಂದಿದೆ. ಈ ಬಾರಿ ಸಂಪ್ರದಾಯ ಪಾಲಿಸಲು ಸಾಂಕೇತಿಕವಾಗಿ ಕೋಳಿಕಟ್ಟ ನಡೆಸಿ ರಕ್ತಬಿಂದು ಭೂಮಿಗೆ ಬೀಳುವಂತೆ ಮಾಡಲಾಗುವುದೇ? ಎಂದು ತಿಳಿದುಬಂದಿಲ್ಲ.