
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ
ಫೆ.7.ರಂದು ಶ್ರೀ ದೇವರ ಅವಭೃತ ಸ್ನಾನ ಜಳಕದ ಹೊಳೆಯಲ್ಲಿ ಜರುಗಿತು.ಬಳಿಕ ದೇವಳದಲ್ಲಿ ಬಲಿ ಬಟಲು ಕಾಣಿಕೆ.ಧ್ವಜಾವರೋಣ ಜರುಗಿತು. ದೇವಳದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿ ಸಂಚಾಲಕರು,ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.















.7 ಮುಂಜಾನೆ ಕವಾಟೋದ್ಘಾಟನೆ, ದೇವರಿಗೆ ಅಭಿಷೇಕ, ಮಹಾಪೂಜೆ , ಪೂರ್ವಾಹ್ನ ಗರಡಿ ಬೈಲು ಮೂಲನಾಗನ ಕಟ್ಟೆಯಲ್ಲಿ ತಂಬಿಲ ಸೇವೆ. ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು .ಅಪರಾಹ್ನ 3 ಕ್ಕೆ ದೇಗುಲದ ಭಂಡಾರ ಮನೆಯಿಂದ ಶ್ರೀ ಕಾಚುಕುಜುಂಬ ಮತ್ತು ಶ್ರೀ ಉಳ್ಳಾಕುಲು ದೈವಗಳ ಭಂಡಾರವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿಬೈಲಿಗೆ ಹೋಗಿ ಧ್ವಜಾರೋಹಣ, ಸಂಜೆ ಗಂಟೆ 6 ರಿಂದ ಶ್ರೀ ಉಳ್ಳಾಕ್ಲು ದೈವದ ನೇಮ. ಅನ್ನಸಂತರ್ಪಣೆ ,ರಾತ್ರಿ ಗಂಟೆ 8 ರಿಂದ ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ,ಧ್ವಜಾವರೋಹಣ.ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೇಗುಲದ ಭಂಡಾರ ಮನೆಗೆ ತರುವುದು ನಡೆಯಲಿದೆ.

ಫೆ.8.ರಂದು ಮುಂಜಾನೆ ಮಹಾ ಪೂಜೆ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ. ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪುತ್ಯದಿಂದ ಶಿರಾಡಿ ದೈವದ ಭಂಡಾರ ತರುವುದು ಹಾಗೂ ರುದ್ರ ಚಾಮುಂಡಿ ದೈವದ ಭಂಡಾರ ತೆಗೆಯುವುದು.
ಫೆ.9 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ, ಅನ್ನಸಂತರ್ಪಣೆ ನಡೆಯಲಿದೆ.







