














ಸುಳ್ಯ ಜಟ್ಟಿಪಳ್ಳದ ಬೊಳಿಯಮಜಲು ರಸ್ತೆಯಲ್ಲಿ ಎಸ್.ವಿಜಯಾನಂದರ ತೋಟದ ಪಕ್ಕದಲ್ಲಿರುವ ರದ್ತೆಬದಿಯ ಮರಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಇಂದು ರಾತ್ರಿ ನಡೆದಿದೆ.ಬೆಂಕಿ ತಗುಲಲು ಸರಿಯಾದ ಕಾರಣ ತಿಳಿದುಬಂದಿಲ್ಲ.

ಯಾರೋ ಮರಕ್ಕೆ ಬೆಂಕಿ ಕೊಟ್ಟಿರಬೇಕೆಂದು ಕೆಲವರು ಹೇಳುತ್ತಿದ್ದರೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಸಂಭವವಿದೆಯೆಂದು ವಿಜಯಾನಂದರು ಅಭಿಪ್ರಾಯಪಟ್ಟಿದ್ದಾರೆ.ಮರಕ್ಕೆ ಬೆಂಕಿ ತಗುಲಿರುವ ವಿಷಯ ತಿಳಿದು ಸುಳ್ಯ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.








