ನಿಂತಿಕಲ್ಲು : ಕೋಕೋ ಮಿತ್ರ ಸಂಸ್ಥೆ ಲೋಕಾರ್ಪಣೆ

0

ಧ್ಯೆಯೋದ್ಧೇಶ, ಗುಣಮಟ್ಟ ಕಾಯ್ದುಕೊಂಡಲ್ಲಿ ವ್ಯಾಪಾರೋದ್ಯಮ ಸುಗಮ : ಶ್ರೀ ಧರ್ಮಪಾಲನಾಥ ಸ್ವಾಮೀಜಿ

ನಿಂತಿಕಲ್ಲಿನ ಸಾಧನಾ ಸಹಕಾರಿ ಸೌಧದಲ್ಲಿ ಪರಿಶುದ್ಧವಾದ ನೈಸರ್ಗಿಕ ತೆಂಗಿನೆಣ್ಣೆ ಮತ್ತು ಇತರ ಉತ್ಪನ್ನಗಳ ತಯಾರಿಕಾ ಘಟಕ ಕೋಕೋ ಮಿತ್ರ ಇಂದು (ಮಾ.15) ಲೋಕಾರ್ಪಣೆಗೊಂಡಿತು.

ದೀಪ ಪ್ರಜ್ವಲನೆ ಮಾಡಿದ ಬಳಿಕ ಆಶೀರ್ವಚನ ನೀಡಿದ ಮಂಗಳೂರು ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಗ್ರಾಹಕರ ಪ್ರೀತಿ ಗಳಿಸಿ ಗುಣಮಟ್ಟ ಕಾಯ್ದು ಕೊಂಡಲ್ಲಿ ವ್ಯಾಪಾರ ಸುಗಮ. ಕೋಕೋ ಮಿತ್ರ ಮಿತ್ರರನ್ನು ಗಳಿಸಿ ಗಳಿಸಬೇಕೆಂದು ಹೇಳಿದರು.ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಿ ಯುವಕರು ಮುಂದೆ ಬಂದು ಸ್ವಂತ ಉದ್ಯೋಗದೊಂದಿಗೆ ಇತರರಿಗೆ ಉದ್ಯೋಗ ಕೊಡಿಸಬೇಕೆಂದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಘಟಕದ ಕಚೇರಿಯನ್ನು ಉದ್ಘಾಟನೆ ಮಾಡಿದರು.


ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ನಡುಬೈಲು ರವರು ತೆಂಗಿನ ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ದರು.ಹಾವೇರಿ ಜಾನಪದ ವಿಶ್ವ ವಿದ್ಯಾ ಲಯದ ವಿಶ್ರಾಂತ ಕುಲಪತಿ ಡಾ‌.ಕೆ.ಚಿನ್ನಪ್ಪ ಗೌಡ
ಕೋಕೋ ಮಿತ್ರ ಲೋಗೋ ಅನಾವರಣಗೊಳಿಸಿದರು,, ಕಡಬ ಸ್ಪಂದನ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಕಲಾಯಿ ಗುತ್ತು ಎಣ್ಣೆ ಪ್ಯಾಕಿಂಗ್ ಯಂತ್ರ ವನ್ನು ಚಾಲನೆ ನೀಡಿದರು. ಪುತ್ತೂರು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ವೆಬ್ ಸೈಟ್ ಲೋಕಾರ್ಪಣೆ ಮಾಡಿದರು ಮಂಗಳೂರು ಜನತಾ ಬಜಾರ್ ಅಧ್ಯಕ್ಷ ಪ್ರಸನ್ನ ಭಟ್ ಕೆ ಗಾನಕ್ಕೆ ಚಾಲನೆ ನೀಡಿದರು . ಪುತ್ತೂರಿನ ಆಡೀವಾ ಸಂಸ್ಥೆ ಪಾಲುದಾರರಾದ ಶ್ರೀಮತಿ ವಚನಾ ಪ್ರದೀಪ್, ಪುತ್ತೂರು ಸಮರ್ಪಣಾ ಚಾರಿಟೇಬಲ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಮುರುಳ್ಯ ಎಣ್ಮೂರು ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ಚಿದಾನಂದ ರೈ ಮುಖ್ಯ ಅತಿಥಿಯಾಗಿದ್ದರು. ಕರ್ನಾಟಕ ಬ್ಯಾಂಕ್ ಬ್ರಾಂಚ್ ಮೆನೇಜರ್ ಗಳಾದ ರಾಜ ರಾಮ್, ಪ್ರವೀಣ್ ಕೂಡೂರು, ಬೆಳ್ಳಾರೆ ಶ್ರೀ ರಾಮ ಇಂಡಸ್ಟ್ರಿಯಲ್ ಬಾಲಕೃಷ್ಣ ಕುರ್ಮ ಕೊಡಿ, ವೇದಿಕೆಯಲ್ಲಿದ್ದರು,
ನಾಗೇಶ್ ಕೆಡೆಂಜಿ, ವಸಂತ ಹೇಮಳ, ಯೋಗೀಶ್ ಕೆಡೆಂಜಿ, ಮಿಥುನ್ ಗರಡಿ, ಕವಿತಾ ಲೋಕೇಶ್, ದಯಾಮಣಿ ನಾಗೇಶ್ ಕುಶಾಲಪ್ಪ ಹುದೇರಿ, ಕಾರ್ಯಕ್ರಮ ದಲ್ಲಿ ಸಹಕರಿಸಿದರು ನಿವೃತ್ತ


ಪ್ರಾಚಾರ್ಯ ಜೇಸಿ ಸೀತಾರಾಮ ಕೇವಳ ಕಾರ್ಯಕ್ರಮ ಸಂಯೋಜನೆ ಮಾಡಿ ನಿರೂಪಿಸಿದರು. ಸಂದರ್ಭದಲ್ಲಿ ಚಿದಾನಂದ ಬೈಲಾಡಿ ಗಣೇಶ್ ಉದನಡ್ಕ, ಮುರಳಿ ರೈ ಯವರನ್ನು ಸ್ವಾಮೀಜಿಯವರು ಸಂಸ್ಥೆಯ ಪರವಾಗಿ ಗೌರವಿಸಿದರು ಶಾಲಿನಿ, ಪುಣ್ಯ, ನಿಶಾನಿ ಯವರು ಪ್ರಾರ್ಥನೆ ಮಾಡಿದರು, ಸಂಸ್ಥೆಯ ಮುಖ್ಯಸ್ಥ ನಾಗೇಶ್ ಕೆಡೆಂಜಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆಮ್ಮಲೆ ಮೆಡಿಕಲ್ ಮಾಲಿಕ ಗೋಪಾಲ ಕೃಷ್ಣ ಹೇಮಳ ವಂದಿಸಿದರು.

(ವರದಿ; ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ)