













ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ತರವಾಡು ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಸ್ಥಾನದಲ್ಲಿ ಮಾಮೂಲು ಪ್ರಕಾರ ನಡೆಯಲಿರುವ ಶ್ರೀ
ದೈವಗಳ ಕಳಿಯಾಟ ಮಹೋತ್ಸವವು ಮಾ. 24,25 ಮತ್ತು 26 ರಂದು ಮೂರು ದಿನಗಳ ಕಾಲ ನಡೆಯಲಿರುವುದು.
ಮಾ. 24 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ
ನಾಗ ತಂಬಿಲ ಸೇವೆಯಾಗಲಿರುವುದು. ರಾತ್ರಿ ಕಳಿಯಾಟಕ್ಕೆ ಕೂಡಿ ಉಗ್ರಾಣ ತುಂಬುವುದು. ಬಳಿಕ ಕೖವೀದ್ ನಡೆಯಲಿದೆ. ನಂತರ ವಯನಾಟ್ ಕುಲವನ್
ದೈವಸ್ಥಾನದಿಂದ ಕಲಶ ತಂದು ವಿಷ್ಣುಮೂರ್ತಿ
ದೈವದ ಕುಲ್ಚಾಟವಾಗಿ
ಗುರುಕಾರ್ನೋರು ದೈವದ ಕೋಲವು ನಡೆಯಲಿದೆ. ಮಾ. 25 ರಂದು ಪೂರ್ವಾಹ್ನ ಶ್ರೀ ಪೊಟ್ಟನ್ ದೈವ,ಅಪರಾಹ್ನ ಶ್ರೀ ರಕ್ತೇಶ್ವರಿ ದೈವ, ಸಂಜೆ ಶ್ರೀ ಪಿಲಿಭೂತ, ರಾತ್ರಿ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮದೈವ , ಶ್ರೀ ಪಾಷಾಣ ಮೂರ್ತಿ ದೈವಗಳ ಕೋಲವು ನಡೆಯಲಿದೆ. ಬಳಿಕ ದೈವದ ಕಲಶ ಹೊರುವುದು, ಬಳಿಕ ಹರಿಕೆಯಾಗಿ ಪ್ರಸಾದ ವಿತರಣೆಯಾಗಲಿದೆ.
ಈ ಸಂದರ್ಭದಲ್ಲಿ ತುಲಾಭಾರ ಸೇವೆಯು ನಡೆಯಲಿದೆ. ಮಾ. 26 ರಂದು ಸಂಜೆ 4.00 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ, ರಾತ್ರಿ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮ ದೈವ, ಶ್ರೀ ಪಾಷಾಣ ಮೂರ್ತಿ ದೈವಗಳ ಕೋಲವುನಡೆಯಲಿರುವುದು. ಬಳಿಕ ದೈವದ ಕಲಶ ತೆಗೆದು ಭಕ್ತಾದಿಗಳಿಂದ ಹರಕೆ ಸಮರ್ಪಣೆಯಾಗಿ ಪ್ರಸಾದ ವಿತರಣೆಯಾಗಿ ತುಲಾಭಾರ ಸೇವೆಯು ನಡೆಯಲಿದೆ. ಕಳಿಯಾಟ ಉತ್ಸವದ ಸಮಯದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ ಎಂದು ಆಡಳ್ತೆದಾರರಾದ ಬಿಪಿನ್ ಕುಡೆಕಲ್ಲು ರವರು ತಿಳಿಸಿದರು.







