ಆರೋಪಿ ತುಮಕೂರಿನಲ್ಲಿ ಬಂಧನ- ಶಿಕ್ಷೆ ಪ್ರಕಟ















ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಳ್ಳತನ ನಡೆಸಿದಾತನಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ಘಟನೆ ವರದಿಯಾಗಿದೆ
16/05/2019 ರಂದು ರಾತ್ರಿ ಸಮಯ 9 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ಸನ್ನಿಧಿಯ ಮುಂಭಾಗದಲ್ಲಿ ಇಟ್ಟಿರುವ ಹುಂಡಿಯಿಂದ ₹ 1885/- ರೂ ಕಳವು ಮಾಡಿರುವುದಾಗಿದೆ, ನಂತರ ಆರೋಪಿಯನ್ನು ಸುಬ್ರಹ್ಮಣ್ಯ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ದಿನಾಂಕ 17/05/2019ರಂದು ಹಾಜರು ಪಡಿಸಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.
ಸದ್ರಿ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೊಂಡು ದಿನಾಂಕ 17/05/2025 ರಂದು ಆರೋಪಿಯು ತಪ್ಪಿತಸ್ಥ ಎಂದೂ ಸಾಬೀತಾಗಿರುತ್ತದೆ. ನಂತರ ಮಾನ್ಯ ನ್ಯಾಯಾಧೀಶರು ಅಪರಾಧಿಯನ್ನು PO Act ಮೇಲೆ ಬಿಟ್ಟಿದ್ದು. ನಂತರ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವುದರಿಂದ ಆರೋಪಿಗೆ ವಾರೆಂಟ್ ಹೊರಡಿಸಿರುತ್ತಾರೆ. 24/03/2026 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಮಹೇಶ್ & ಕಾನ್ಸ್ಟೇಬಲ್ ಕಿರಣ ಎಂಬುವರು ತುಮಕೂರು ಜಿಲ್ಲೆ ತಿಪಟೂರು ತಾಲೂಕು ಗುಂಗೂರುಮಳೆ ಎಂಬಲ್ಲಿ ದಸ್ತಗಿರಿ ಮಾಡಿ ದಿನಾಂಕ 25/03/2026 ರಂದು ಮಾನ್ಯ ಸುಳ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯದ ನ್ಯಾಯಾದೀಶರಾದ ಶಿವಣ್ಣ ಹೆಚ್ ಆರ್ ರವರು ಆರೋಪಿಗೆ ಕಲಂ 380 IPC ಅಡಿಯಲ್ಲಿ ಒಂದು ವರ್ಷ ಸಾದಾರಣ ಸಜೆಯನ್ನು ಹಾಗೂ 1000 ರೂ ದಂಡವನ್ನು ವಿಧಿಸಿದ್ದು ಒಂದು ವೇಳೆ ದಂಡ ಪಾವತಿಸದಿದ್ದರೆ 10 ದಿನಗಳ ಸಜೆಯನ್ನು ನೀಡಿ ಆದೇಶ ಹೊರಡಿಸುತ್ತಾರೆ ಎಂದು ತಿಳಿದು ಬಂದಿದೆ






