ಬೆಳ್ಳಾರೆ : ಕಾರುಗಳ ಮುಖಾಮುಖಿ ಡಿಕ್ಕಿ – ಪಾದಚಾರಿಗೆ ಗಾಯ

0

ಬೆಳ್ಳಾರೆಯಲ್ಲಿ ಕಾರು ಕಾರು ಡಿಕ್ಕಿಹೊಡೆದುಕೊಂಡ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಗುದ್ದಿ ಗಂಭೀರ ಗಾಯವಾದ ಘಟನೆ ಇಂದು ಸಂಜೆ ನಡೆದಿದೆ.


ಮಾರುತಿ 800 ಕಾರು ಮತ್ತು ಬ್ರೀಝಾ ಕಾರುಗಳು ಡಿಕ್ಕಿ ಹೊಡೆದುಕೊಂಡವು ಡಿಕ್ಕಿ ಹೊಡೆದುಕೊಂಡ ಪರಿಣಾಮ ಅಲ್ಲಿಯೇ ಹತ್ತಿರದಲ್ಲಿ ನಡೆದುಕೊಂಡವರಿಗೆ ಕಾರು ಗುದ್ದಿತು.
ಕಾರು ಗುದ್ದಿದ ಪರಿಣಾಮ ಪೆರುವಾಜೆಯವರೋರ್ವರಿಗೆ ಗಂಭೀರ ಗಾಯವಾಯಿತು.
ಗಾಯಗೊಂಡವರನ್ನು ಕೂಡಲೇ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿದು ಬಂದಿದೆ.
ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿರುವುದಾಗಿ ತಿಳಿದುಬಂದಿದೆ.