ಮಂಗಳೂರು ವಿಶ್ವವಿದ್ಯಾನಿಲಯದ ರತ್ನವರ್ಮ ಹೆಗ್ಗಡೆ ಸ್ಮಾರಕ ರೋಲಿಂಗ್ ಟ್ರೋಫಿ ಅಂತರ್ ಕಾಲೇಜು ಪುರುಷರ ಮೂರು ದಿನಗಳ ಕಬಡ್ಡಿ ಟೂರ್ನ್ಮೆಂಟ್–2026 ಮಾ. 25ರಂದು ಎನ್.ಎಂ.ಸಿ. ಮೈದಾನದಲ್ಲಿ ಉದ್ಘಾಟನೆಗೊಂಡಿತು.














ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಕಾರ್ಯದರ್ಶಿ ಕೆ.ವಿ ಹೇಮಾನಾಥ್ ವಹಿಸಿ ಶುಭ ಹಾರೈಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಎಒಎಲ್ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ
ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ, ಮಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರು ಶೇಷಪ್ಪ ಗೌಡ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಎನ್.ಎಂ.ಸಿ ಆಡಳಿತಾಧಿಕಾರಿ ಚಂದ್ರಶೇಖರ ಪೆರಾಲು, ಪ್ರಾಂಶುಪಾಲರಾದ ಡಾ. ರುದ್ರ ಕುಮಾರ್ ಎಂ.ಎಂ, ಎನ್.ಎಂ.ಸಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ್, ನೆಹರೂ ಮೆಮೋರಿಯಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಸೀತಾರಾಮ ಎಂ.ಡಿ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ, IQAC ಸಂಯೋಜಕಿ ಡಾ. ಮಮತಾ. ಕೆ ಉಪಸ್ಥಿತರಿದ್ದರು. ಬಳಿಕ ಕ್ರೀಡಾಂಗಣವನ್ನು ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿನಿ ಶ್ರೀಲಯ ಪ್ರಾರ್ಥಿಸಿದರು, ಡಾ. ರುದ್ರ ಕುಮಾರ್ ಎಂ.ಎಂ ಸ್ವಾಗತಿಸಿ, ಡಾ ಮಮತಾ ಕೆ ವಂದಿಸಿದರು. ಉಪನ್ಯಾಸಕರಾದ ಬೇಬಿ ವಿದ್ಯಾ ಪಿ.ಬಿ ಹಾಗೂ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ಕಬಡ್ಡಿ ಆಟಗಾರರು, ದೈಹಿಕ ಶಿಕ್ಷಣ ನಿರ್ದೇಶಕರು, ತೀರ್ಪುಗಾರರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.







