ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ದೇವರ ನೃತ್ಯ ಬಲಿ- ಕಟ್ಟೆ ಪೂಜೆ

0

ಪೆರಾಜೆ ಶ್ರೀ ಶಾಸ್ತಾವು
ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಆರಂಭವಾಗಿದ್ದು ಮಾ. 26 ರಂದು ಶ್ರೀ ದೇವರ ನೃತ್ಯ ಬಲಿ ಹಾಗೂ ಕಟ್ಟೆ ಪೂಜೆ ನಡೆಯಿತು.

ಬೆಳಿಗ್ಗೆ ಮಹಾಸಮಾರಧನೆ, ಶ್ರೀ ದೇವರಿಗೆ ಪೂಜೆ , ಭೂತ ಬಲಿ ಬಳಿಕ ದೇವರ ನೃತ್ಯ ಬಲಿ ಹಾಗೂ ಕಟ್ಟೆ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕರು ರಾಜಗೋಪಾಲ ರಾಮಕಜೆ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.