ಕೊಡಗು ಸಂಪಾಜೆ : ಚಡಾವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾದ ದೋಸ್ತ್ ವಾಹನ

0

ಕೊಡಗು ಸಂಪಾಜೆಯ ಚೆಡಾವು ಸಮೀಪ ಚಾಲಕನ ನಿಯಂತ್ರಣ ತಪ್ಪಿ ದೋಸ್ತ್ ವಾಹನ ಪಲ್ಟಿಯಾದ ಘಟನೆ ಏ.5 ರಂದು ಸಂಭವಿಸಿದೆ.

ಸುಳ್ಯದಿಂದ ಸಂಪಾಜೆ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ದೋಸ್ತ್ ವಾಹನ ಚಡಾವಿನ ತಿರುವಿನಲ್ಲಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ. ಪರಿಣಾಮವಾಗಿ ವಾಹನದಲ್ಲಿದ್ದವರಿಗೆ ಗಾಯವಾಗಿದ್ದು ಕೂಡಲೇ ವಿಷಯ ತಿಳಿದ ರಚನ್ ಹಾಗೂ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದು ತಾಜುದ್ದೀನ್ ಟರ್ಲಿ ಅವರ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲುಪಡಿಸಿದ್ದಾರೆ.