ಕಾರಿನ ಪ್ರಯಾಣಿಕರು ಮತ್ತು ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು














ಅರಂಬೂರು ಪಾಲಡ್ಕ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಮತ್ತು ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಏಪ್ರಿಲ್ 5ರಂದು ರಾತ್ರಿ ಸಂಭವಿಸಿದೆ.
ಗಾಯಾಳುಗಳನ್ನು ಸುಳ್ಯದ ಆಂಬುಲೆನ್ಸ್ ಮೂಲಕ ಕೆವಿಜಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಬೈಕ್ ಸವಾರ ದೊಡ್ಡ ತೋಟ ನಿವಾಸಿ ಎಂದು ತಿಳಿದುಬಂದಿದ್ದು ಕಾರು ಕಲ್ಚರ್ಪೆ ನಿವಾಸಿಗಳದು ಎಂದು ಹೇಳಲಾಗುತ್ತಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.







