













ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
2024 -25ನೇ ಸಾಲಿನ ಗಾಂಧೀ ಗ್ರಾಮ ಪುರಸ್ಕಾರ ಪ್ರಕಟಗೊಂಡಿದ್ದು ತಾಲೂಕಿನಿಂದ ಸಂಪಾಜೆ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
2024-2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ, ರಾಜ್ಯದ ಒಟ್ಟು 239 ತಾಲ್ಲೂಕುಗಳ ಪೈಕಿ ಬಾಗಲಕೋಟೆ ಜಿಲ್ಲೆಯ ‘ತೇರದಾಳ’ ತಾಲ್ಲೂಕನ್ನು ಹೊರತುಪಡಿಸಿ, ವಿಭಾಗ ಮಟ್ಟದ ಪುರಸ್ಕಾರಕ್ಕೆ 12, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ 31 ಹಾಗೂ ತಾಲ್ಲೂಕು ಮಟ್ಟದ ಪುರಸ್ಕಾರಕ್ಕೆ 195
ಪಂಚಾಯತ್ ಗಳು ಸೇರಿದಂತೆ ಒಟ್ಟು 238 ಗ್ರಾಮ ಪಂಚಾಯತಿಗಳನ್ನು ನಿಯಮಾನುಸಾರವಾಗಿ ಆಯ್ಕೆ ಮಾಡಲಾಗಿದೆ.
ಈ ಹಿಂದೆ 2014 ರಲ್ಲಿ ಮತ್ತು 2021 ರಲ್ಲಿ ಸಂಪಾಜೆ ಪಂಚಾಯತ್ ಗೆ ಗಾಂಧಿಗ್ರಾಮ ಪುರಸ್ಕಾರ ಲಭಿಸಿತ್ತು.







