ಶಾಂತಿನಗರ ಮದ್ರಸದಲ್ಲಿ ಮಾಸಿಕ ಸ್ವಲಾತ್ ಹಾಗೂ ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ

0

ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಸಿಯೇಷನ್(ರಿ) ಇದರ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮಾಸಿಕ ಸ್ವಲಾತ್
ಕಾರ್ಯಕ್ರಮ ಏ 12 ರಂದು ರಾತ್ರಿ
ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ 2025 – 26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾವಿ ಭಾಗದಲ್ಲಿ 595 ಅಂಕವನ್ನು ಪಡೆದು ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಫಾತಿಮತ್ ಸಹಲಾ,ಹಾಗೂ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ವತಿಯಿಂದ ನಡೆದ ಐದನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ತರಗತಿಗೆ ಅಗ್ರ ಸ್ಥಾನವನ್ನು ಪಡೆದ ವಿದ್ಯಾರ್ಥಿ ರಾಝಿ, ಹಾಗೂ ಹತ್ತನೆಯ ತರಗತಿಯ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಅಗ್ರಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಹಿಮ್ನ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ದುವಾ ನೇತೃತ್ತ ಹಾಗೂ ಮುಖ್ಯ ಪ್ರಭಾಷಣವನ್ನು ಬಹು ಸೆಯ್ಯದ್ ಉವೈಸ್ ನಈಮಿ ಅಲ್-ಜೀಲಾನಿ ತಂಙಳ್ ಮಲಪ್ಪುರಂ ಇವರು ನಿರ್ವಹಿಸಿದರು.ಸ್ವಲಾತ್ ಮಜ್ಲಿಸ್ ನೇತೃತ್ವವನ್ನು ಮೊಗರ್ಪಣೆ ಜುಮಾ ಮಸೀದಿಯ ಮುದರ್ರಿಸ್
ಅಬ್ದುಲ್ ಖಾದರ್ ಸಖಾಫಿ ಅಲ್‌ ಕಾಮಿಲಿ ಮುದುಗುಡ ಇವರು ವಹಿಸಿದ್ದರು.ಪ್ರಾಸ್ತಾವಿಕ ಭಾಷಣ ಹಾಗೂ ಗಣ್ಯರ ಸ್ವಾಗತವನ್ನು ಮದ್ರಸ ಸದರ್ ಮುಆಲ್ಲಿಮ್ ಅಬ್ದುರಶೀದ್ ಝೖನಿ ಪೆರಾಜೆ ಇವರು ನಿರ್ವಹಿಸಿದರು.

ವೇದಿಕೆಯಲ್ಲಿ ಸ್ಥಳೀಯ ಮದ್ರಸ ಸಮಿತಿಯ ಅಧ್ಯಕ್ಷರಾದ ಹಾಜಿ ಪಳ್ಳಿ ಕುಂಞಿ, ಧಾರ್ಮಿಕ ಗುರುಗಳಾದ ಅಶ್ರಫ್ ಅಂಜುಮಿ, ಬಶೀರ್ ಸಕಾಫಿ ಜಯನಗರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಬ್ದುಲ್ ಖಾದರ್ ಅಂದು ಹಾಗೂ ಸಮಿತಿಯ ಸದಸ್ಯರುಗಳು,ಸ್ಥಳೀಯ ಯುವಕರು ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು.