ಮಿತ್ರ ಮಂಡಲ ನಾಗತೀರ್ಥ (ರಿ). ವತಿಯಿಂದ NCL season- 1 ಮಿತ್ರ ಟ್ರೋಫಿ 2026 8 ತಂಡಗಳ ಲೀಗ್ ಮಾದರಿಯ ಪಂದ್ಯಾಟ ಕೋಟಿ ಚೆನ್ನಯ ಕ್ರೀಡಾಂಗಣ ನಾಗತೀರ್ಥದಲ್ಲಿ ನಡೆಯಿತು. ಪಂದ್ಯಾಕೂಟವನ್ನು ಶ್ರೀಧರ್ ಪೈಲಾರ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಆದ್ಯಕ್ಷರಾದ ಹಿತೇಶ್ ಪಂಜದಬೈಲು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಕಾರ್ತಿಕ್ ನಾಗತೀರ್ಥ ಅಧ್ಯಕ್ಷತೆ ವಹಿಸಿದರು. ಉದ್ಘಾಟನೆಯನ್ನು ಶ್ರೆಯಾಂಸ್ ಕುಮಾರ್ ಶೆಟ್ಟಿಮೂಲೆ ನೆರವೇರಿಸಿದರು ಮುಖ್ಯ ಅತಿಥಿಯಾಗಿ ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಮಿತ್ರ ಮಂಡಲ ನಾಗತೀರ್ಥ ಇದರ ಸ್ಥಾಪಕ ಅದ್ಯಕ್ಷರಾದ ಕೆಂಚಪ್ಪ ಗೌಡರವರು ಗೌರವ ಉಪಸ್ಥಿತರಿದ್ದರು
ದೇಶಕ್ಕೆ ಸೇವೆ ಸಲ್ಲಿಸಿದ ವೀರ ಯೋಧ ಶ್ರೀ ಗಿರೀಶ್ ಆರ್ನೂಜಿ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಧರ್ಮ ಪತ್ನಿ ಶ್ರೀಮತಿ ಚಿತ್ರಕಲಾ ಗಿರೀಶ್ ರವರು ಗೌರವಾರ್ಪಣೆ ಸ್ವೀಕಾರ ಮಾಡಿದರು.















ಮಿತ್ರ ಮಂಡಲ ನಾಗತೀರ್ಥ ಇದರ ಕ್ರೀಡಾ ಕಾರ್ಯದರ್ಶಿ ನಿತಿನ್ ನಾಗತೀರ್ಥ, ಕಾರ್ಯದರ್ಶಿ ದೀಕ್ಷಿತ್ ನಾಗತೀರ್ಥ ,
ಪಂದ್ಯಕೂಟದ ಸಂಯೋಜಕರಾದ ನಿಖಿಲ್ ಕಕ್ಯಾನ ಹಾಗೂ 8 ತಂಡಗಳ ಮಾಲಕರದ ವಿನಯ್ ಕರಿಕ್ಕಲ ಹನಿ ಹಂಟರ್ಸ್ , ಜಮಾಲ್ ಮುಚ್ಚಿಲ ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ, ಹೇಮಂತ್ ಕೇನ್ಯ ಫ್ರೆಂಡ್ಸ್ ಕ್ಲಬ್ ಕೇನ್ಯ, ಭರತ್ ಕೊಟ್ರಂಜ ಕಲರ್ ಈಗಲ್ಸ್ , ಸಿದ್ದೀಕ್ ಪೊಳೆಂಜ ದಿಲ್ದಾರ್ ಪೊಳೆಂಜ, ಉಬೈಸ್ ಕರೀಂಬಿಲ ಸಿ ಎಫ್ ಸಿ ಕರೀಂಬಿಲ, ಕುಸುಮಾಧರ ಮಿತ್ರಾಣೆ ಕನಸು ಬ್ರದರ್ಸ್, ಪುನೀತ್ ಮಂಚಿಕಟ್ಟೆ ವಿಸ್ತಾರ ಸ್ಟ್ರೈಕರ್ಸ್, ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದರು.
ಕುಮಾರಿ ಅಮೋಘ ರವರು ಪ್ರಾರ್ಥನೆಯನ್ನು ಮಾಡಿದರು.
ನಿಖಿಲ್ ಕಕ್ಯಾನರವರು ಸ್ವಾಗತಿಸಿದರು
ದೀಕ್ಷಿತ್ ನಾಗತೀರ್ಥ ರವರು ಧನ್ಯವಾದವನ್ನು ಸಮರ್ಪಿಸಿದರು. ಪುರಂದರ ಶೆಟ್ಟಿ ನಾಗತೀರ್ಥ ರವರು ನಿರೂಪಣೆ ಮಾಡಿದರು.

ಮಿತ್ರ ಮಂಡಲ ನಾಗತೀರ್ಥ ಇದರ ಅಧ್ಯಕ್ಷರಾದ ಕಾರ್ತಿಕ್ ನಾಗತೀರ್ಥ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಯಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ ದೇವಿಪ್ರಸಾದ್ ಕಾನತ್ತೂರ್,ಯುವಜನ ಸಂಯುಕ್ತ ಮಂಡಳಿ ರಿ ಸುಳ್ಯ ಇದರ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ ಉಪಸ್ಥಿತರಿದ್ದರು.
ಪ್ರಥಮ ಸ್ಥಾನ ಜಮಾಲ್ ಮುಚ್ಚಿಲ ಮಾಲಿಕತ್ವದ ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ
ದ್ವಿತೀಯ ಸ್ಥಾನ ವಿನಯ್ ಕರಿಕ್ಕಳ ಮಾಲಿಕತ್ವ ಹನಿ ಹಂಟರ್ಸ್
ತೃತೀಯ ಸ್ಥಾನ. ಭರತ್ ಕೊಟ್ರಂಜ ಮಾಲಿಕತ್ವದ ಕಲರ್ ಈಗಲ್ಸ್
ಚತುರ್ಥ ಸ್ಥಾನ. ಕುಸುಮಾಧರ ಮಿತ್ರಾಣೆ ಮಾಲಿಕತ್ವದ ಕನಸು ಬ್ರದರ್ಸ್
ವಯಕ್ತಿಕ ಬಹುಮಾನ ವನ್ನು ಸುಶಾಂತ್ ನರ್ಲಡ್ಕ ಸರಣಿ ಶ್ರೇಷ್ಠ, ಅಜಿತ್ ಬಾಳಿಲ ಉತ್ತಮ ದಂಡುಗಾರ, ಜಮಾಲ್ ಮುಚ್ಚಿಲ ಉತ್ತಮ ಗೂಟ ರಕ್ಷಕ, ಕೃತಿನ್ ಕಲ್ಮಡ್ಕ ಉತ್ತಮ ಕ್ಷೇತ್ರ ರಕ್ಷಕ, ಪ್ರಶಾಂತ್ ಕಲ್ಮಡ್ಕ ಗೇಮ್ ಚೇಂಜರ್ಜ, ಯಂತ ಶೆಟ್ಟಿಗದ್ದೆ ಡಿಸೆಂಟ್ ಪ್ಲೇಯರ್ ಪಡೆದುಕೊಂಡರು
ಕಾರ್ಯಕ್ರಮವನ್ನು ಪುರಂದರ ಶೆಟ್ಟಿ ನಿರೂಪಿಸಿದರು.









