ಸುಳ್ಯ ಯುವಜನ ಸಂಯುಕ್ತ ಮಂಡಳಿ ವಿನ್ನರ್ – ಸಹಕಾರಿ ತಂಡ ರನ್ನರ್














ಸುಳ್ಯ ಸುದ್ದಿ ಸಂಸ್ಥೆಯ ವತಿಯಿಂದ ನಡೆದ 16 ನೇ ವರ್ಷದ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಚಾಂಪಿಯನ್ ಆದರೆ, ಸುಳ್ಯದ ಸಹಕಾರಿ ಸಂಘ ರನ್ನರ್ ಆಗಿ ಹೊರ ಹೊಮ್ಮಿತು.

ಸೆಮಿಫೈನಲ್ ನಲ್ಲಿ ಪೋಲೀಸ್ ತಂಡವನ್ನು ಮಣಿಸಿ ಸಹಕಾರಿ ತಂಡ ಫೈನಲಿಗೇರಿದರೆ, ಕೆ.ವಿ.ಜಿ. ಕ್ಯಾಂಪಸ್ ತಂಡವನ್ನು ಸೋಲಿಸಿ ಯುವಜನ ಸಂಯುಕ್ತ ಮಂಡಳಿ ತಂಡ ಫೈನಲಿಗೇರಿತು.
ಸಂಜೆ ಬಹುಮಾನ ವಿತರಣೆ ನಡೆಯಿತು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರು ಅಧ್ಯಕ್ಷತೆ ವಹಿಸಿದ್ದರು.
ಸುಳ್ಯದ ತಹಶೀಲ್ದಾರ್ ಮಂಜುಳಾ, ಸುಳ್ಯ ಎ.ಸಿ.ಎಫ್. ಪ್ರಶಾಂತ್ ಪೈ, ಸುಳ್ಯ ಎ.ಪಿ.ಎಂ.ಸಿ. ಕಾರ್ಯದರ್ಶಿ ರವೀಂದ್ರ, ಸುಳ್ಯ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸುಳ್ಯದ ಉದ್ಯಮಿ ಅಬ್ದುಲ್ ಕುಂಞಿ ಸಂಕೇಶ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಉಬರಡ್ಕಮಿತ್ತೂರು ಸಹಕಾರ ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ, ಪಂದ್ಯಾಟದ ಸಂಯೋಜಕ ಶ್ರೀಧರ ಕಜೆಗದ್ದೆ, ಸುದ್ದಿ ಸುಳ್ಯಕಚೇರಿ ಮ್ಯಾನೇಜರ್ ಯಶ್ವಿತ್ ಕಾಳಮ್ಮನೆ, ಮಾಹಿತಿ ವಿಭಾಗದ ಮುಖ್ಯಸ್ಥರಾದ ಕೃಷ್ಣ ಬೆಟ್ಟ ವೇದಿಕೆಯಲ್ಲಿ ಇದ್ದರು.
ಸುದ್ದಿ ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್ ಕೆರೆ ಪ್ರಾಸ್ತಾವಿಕ ಮಾತನಾಡಿದರು. ಸಂಘಟಕರಾದ ಶರೀಫ್ ಜಟ್ಟಿಪಳ್ಳ ಬಹುಮಾನ ಪಟ್ಟಿ ವಾಚಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.







