













ಸುಳ್ಯದ ನಾವೂರಿನ ಕಲ್ಕುಡ ದೈವಸ್ಥಾನದ ನೂತನ ಶಿಲಾಮಯ ಗುಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಇಂದು ಬೆಳಗ್ಗೆ ದಾರಂದ ಮುಹೂರ್ತವು ನೆರವೇರಿತು.
ಆಡಳಿತ ಧರ್ಮ ದರ್ಶಿಗಳಾದ ಪಿ. ಕೆ. ಉಮೇಶ ರವರು
ದೈವಸ್ಥಾನದಲ್ಲಿ ಪ್ರಾರ್ಥಿಸಿ ಬಳಿಕ ವಿಜಯ ಶಿಲ್ಪಿಯವರ ನೇತೃತ್ವದಲ್ಲಿ ಗುಡಿಗೆ ದಾರಂದ ಇಡುವ ಕಾರ್ಯವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು, ದೈವಸ್ಥಾನದ ಪೂಜಾರಿಗಳಾದ ಮೋಹನ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು,
ಧರ್ಮದರ್ಶಿ ಮಂಡಳಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯಪದಾಧಿಕಾರಿಗಳು ಮತ್ತು ಸದಸ್ಯರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.







