ಐವರ್ನಾಡಿನಲ್ಲಿ ವಿಜೃಂಭಿಸಿದ ಸಾರ್ವಜನಿಕ ಯುಗಾದಿ ಸಂಭ್ರಮ

0

ಮನರಂಜಿಸಿದ ಚೆಂಡೆ – ವಾಯಿಲಿನ್ – ಕೊಳಲು ಫ್ಯೂಜನ್ ಆರ್ಕೆಸ್ಟ್ರಾ

ಯುಗಾದಿ ಸಂಭ್ರಮ‌ ಸಮಿತಿ ಐವರ್ನಾಡು ವತಿಯಿಂದ ಸಾರ್ವಜನಿಕ ಯುಗಾದಿ ಸಂಭ್ರಮವು ಎ.15 ರಂದು ಐವರ್ನಾಡಿನಲ್ಲಿ ನಡೆಯಿತು.
ಐವರ್ನಾಡಿನ ಪಾಲೆಪ್ಪಾಡಿ ಒತ್ತೆಕೋಲ ಮೈದಾನದಲ್ಲಿ ಚೆಂಡೆ,ವಾಯಿಲಿನ್,ಕೊಳಲು ಫ್ಯೂಜನ್ ಆರ್ಕೆಸ್ಟ್ರಾ ಜನರನ್ನು ಮನರಂಜಿಸಿತು.
ಸಂಜೆ ಕಾರ್ಯಕ್ರಮವನ್ನು ಜೋತ್ಸ್ನಾ ಪಾಲೆಪ್ಪಾಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ತುಳು ವಾಗ್ಮಿ ತಮ್ಮಣ್ಣ ಶೆಟ್ಟಿಯವರು ಯುಗಾದಿ ಹಬ್ಬದ ವಿಶೇಷತೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಕ್ಯಾಂಪ್ಕೊ ಮಾಜಿ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ,ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಕೋಲ್ಚಾರು,ಪ್ರಗತಿಪರ ಕೃಷಿಕ ಪದ್ಮನಾಭ ನೂಜಾಲು,ಕೆವಿಜಿ ಐಟಿಐ ಪ್ರಾಂಶುಪಾಲ ದಿನೇಶ್ ಮಡ್ತಿಲ,ಉದ್ಯಮಿ ಹರೀಶ್ ರಾವ್ ಉದ್ದಂಪಾಡಿ,ಪ್ರಗತಿಪರ ಕೃಷಿಕ ರಾಮಚಂದ್ರ ಗೌಡ ಪಲ್ಲತ್ತಡ್ಕ,ಗ್ರಾ.ಪಂ.ಸದಸ್ಯ ಸುಂದರಲಿಂಗಂ, ಸಹಕಾರಿ ಸಂಘದ ನಿರ್ದೇಶಕ ಶೇಖರ ಕೊಯಿಲ,ಮಾಜಿ ಸೈನಿಕ ಶ್ರೀಧರ ಪೂಜಾರಿ,ಯುಗಾದಿ ಸಂಭ್ರಮ ಸಮಿತಿ ಕಾರ್ಯದರ್ಶಿ ನಿಖಿಲ್ ಮಡ್ತಿಲ ಉಪಸ್ಥಿತರಿದ್ದರು.


ಯುಗಾದಿ ಸಂಭ್ರಮ ಸಮಿತಿ ಗೌರವ ಅಧ್ಯಕ್ಷ ಬಾಲಕೃಷ್ಣ ಬಿಎಸ್ಸೆನ್ನೆಲ್ ಮಡ್ತಿಲ ಸ್ವಾಗತಿಸಿ,ಅಧ್ಯಕ್ಷ ರಾಜೇಶ್ ನೆಕ್ರೆಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು.
ಭವಿತ್ ಮಿತ್ತಮೂಲೆ ಕಾರ್ಯಕ್ರಮ ನಿರೂಪಿಸಿ,ಮೋಹನ್ ಬೋಳುಗುಡ್ಡೆ ವಂದಿಸಿದರು.
ಯುಗಾದಿ ಸಂಭ್ರಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.