













ಜೀರ್ಣೋದ್ಧಾರಗೊಳ್ಳುತ್ತಿರುವ ಮುರುಳ್ಯ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ಮತ್ತು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ
ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ, ಶ್ರೀ ಪಿಲಿಚಾಮುಂಡಿ, ಶ್ರೀ ಅಂಗಣ ಪಂಜುರ್ಲಿ, ಶ್ರೀ ಗುಳಿಗ ದೈವಗಳಿಗೆ ಗುಡಿಗಳ ಹಾಗೂ ಶ್ರೀ ಬ್ರಹ್ಮರಾಕ್ಷರಾಕ್ಷಸುಗೆ ಕಟ್ಟೆ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಎ.30 ರಂದು ಬೆಳಿಗ್ಗೆ 8:02 ರಿಂದ 8:52ರ ಶುಭ ಮುಹೂರ್ತದಲ್ಲಿ ನಡೆಯಲಿದೆ.
ಕ್ಷೇತ್ರದ ತಂತ್ರಿಗಳಾದ ವಾಸುದೇವ ತಂತ್ರಿಗಳು ಮತ್ತು ರವೀಶ ತಂತ್ರಿಗಳು, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸಹಿತ ಗಣ್ಯರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶಾಸಕಿ ಕು.ಭಾಗೀರಥಿ ಮುರುಳ್ಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿಯವರು ತಿಳಿಸಿದ್ದಾರೆ.







