ಎ.18 ರಂದು ನಿಧನರಾದ ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ನಿವಾಸಿ, ಬಿಜೆಪಿ ಮುಖಂಡ ಅಪ್ಪಯ್ಯ ಸೂಂತೋಡುರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಎ.28 ರಂದು ಮೃತರ ಸ್ವಗೃಹದಲ್ಲಿ ನಡೆಯಿತು.














ಮಾಜಿ ಸಚಿವ ಎಸ್.ಅಂಗಾರ, ಉಬರಡ್ಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ, ಹಾಲಿ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ಸಹಿತ ನೂರಾರು ಮಂದಿ ಆಗಮಿಸಿ ಪುಷ್ಪನಮನ ಸಲ್ಲಿಸಿದರು.

ಅಪ್ಪಯ್ಯ ರ ಪತ್ನಿ, ಉಬರಡ್ಕಮಿತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು, ಪುತ್ರಿಯರಾದ ಅನನ್ಯ, ಅನ್ವಿತಾ, ಸಹೋದರ ಗೋಪಾಲ ಸೂಂತೋಡು, ಸಹೋದರಿಯರಾದ ಶಾರದಾ ಪರ್ಪಡ್ಕ, ಗಿರಿಜ ಅಡ್ಕಾರ್, ಅಮ್ಮಣ್ಣಿ ಪನ್ನೆ, ಸೀತಮ್ಮ ಪೆರ್ನೆ ಹಾಗೂ ಊರವರು, ಅಪ್ಪಯ್ಯರ ಬಿ.ಕಾಂ. ನ ಸಹಪಾಠಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.







