














ಸುಳ್ಯ- ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಗೋಂಟಡ್ಕ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಮರಬಿದ್ದು, ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರ ವ್ಯತ್ಯಯವಾದ ಘಟನೆ ಇಂದು ಸಂಜೆ ವರದಿಯಾಗಿದೆ.

ಸಂಜೆ ಸುರಿದ ಭಾರೀ ಮಳೆ- ಗಾಳಿಗೆ ರಸ್ತೆಗೆ ಅಡ್ಡವಾಗಿ ಮರಬಿದ್ದು ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆಯ ಎರಡು ಬದಿ ವಾಹನ ಸಾಲುಗಟ್ಟಿ ನಿಂತವು. ಬಳಿಕ ದುಗ್ಗಲಡ್ಕದ ಯುವಕರು ಬಂದು ಮರವನ್ನು ತೆರವುಗೊಳಿಸಿದರು. ಬಳಿಕ ವಾಹನ ಸಂಚಾರ ಸುಗಮವಾಯಿತು.
ಮರ ಬಿದ್ದು ವಿದ್ಯುತ್ ಲೈನಿಗೂ ಹಾನಿಯಾಗಿದೆ.ವಿದ್ಯುತ್ ವ್ಯತ್ಯಯಗೊಂಡಿದೆ.







