ಶ್ರೇಯಸ್ ಸುಳ್ಳಿ ಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಧಕ ರೈತ ಪುರಸ್ಕಾರ- “2025-26ನೇ ಸಾಲಿನ ವಿಕ ಸೂಪರ್ ಸ್ಟಾರ್ ರೈತ” ಪ್ರಶಸ್ತಿ
ದ. ಕ. ಜಿಲ್ಲಾಧಿಕಾರಿಗಳಿಂದ ಪ್ರಶಸ್ತಿ ವಿತರಣೆ
ಅಡಿಕೆಗೆ ಪರ್ಯಾಯವಾಗಿ ಬೆಳೆ ಬೆಳೆದು ಯಶಸ್ಸು ಸಾಧಿಸಿದ ನೆಲ್ಲೂರು ಕೆಮ್ರಾಜೆ ಗ್ರಾಮದ ಶ್ರೇಯಸ್ ಸುಳ್ಳಿ ಯವರಿಗೆ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಧಕ ರೈತ ಪುರಸ್ಕಾರ ಲಭಿಸಿದೆ.














ಇಂದು (ಮೇ.13) ಮಂಗಳೂರಿನ ನೀರುಮಾರ್ಗ ಸೇವಾ ಸಹಕಾರಿ ಸಂಘದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜಿಲ್ಲಾ ಮಟ್ಟದ ಪುರಸ್ಕಾರ ಪ್ರದಾನ ಸಮಾರಂಭ
ವಿಕ ಸೂಪರ್ ಸ್ಟಾರ್ ರೈತ – 2025-26 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ಪ್ರಶಸ್ತಿ ಪ್ರಧಾನ ಮಾಡಿದರು. ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೇಯಸ್ ಸುಳ್ಳಿಯವರು ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ಪದ್ಮನಾಭ ಗೌಡ ಮತ್ತು ಮಾಲತಿ ಎಸ್ ಪಿ. ದಂಪತಿಯ ಪುತ್ರ.
ಸುಳ್ಯ ತಾಲ್ಲೂಕಿನಲ್ಲಿ ಅಡಿಕೆಗೆ ಹಳದಿ ರೋಗ, ಎಳೆ ಚುಕ್ಕಿ ರೋಗ ಬಂದು ತೋಟವನ್ನೇ ಕಳೆದುಕೊಳ್ಳುವ ಭೀತಿಯ ಮಧ್ಯೆ ಶ್ರೇಯಸ್ ರವರು ಡ್ರ್ಯಾಗನ್ ಫ್ರೂಟ್ ನ್ನು ಬೆಳೆದು ಯಶಸ್ಸು ಕಂಡಿದ್ದಾರೆ. ಹೊಸ ಕೃಷಿಯನ್ನು ಸಮರ್ಪಕ ರೀತಿಯಲ್ಲಿ ಬೆಳೆದು ಕೃಷಿಕರಿಗೆ ಪರಿಚಯಿಸಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಅದರೊಂದಿಗೆ ಕೋಳಿ ಸಾಕಾಣಿಕೆ, ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ.







