ಜೇಸಿಐ ಪಂಜ ಪಂಚಶ್ರೀ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಮೇ. 22 ರಂದು ಪಂಜ ಲಯನ್ಸ್ ಭವನದಲ್ಲಿ ಜರುಗಿತು.














ನಾದಸ್ವರ ಕಲಾವಿದ, ದೈವ ಸೇವೆಯ ವಾದ್ಯಗಾರ ರಾಧಾಕೃಷ್ಣ ಮೊಗ್ರ ಹಾಗೂ ಎಲೆಕ್ಟ್ರಿಷಿಯನ್ ಆಗಿರುವ ನೆಕ್ಲಾಜೆ ಮೊಗ್ರ ಮೇಲೆ ಮನೆ ವಸಂತ.ಎಂ ಇವರ ಸಾಮಾಜಿಕ ಕಳಕಳಿಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ವಲಯ-15ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಜೇಸಿಐ ಪಂಜ ಪಂಜಶ್ರೀಯ ಅಧ್ಯಕ್ಷ ಜೇಸಿ ದೇವಿ ಪ್ರಸಾದ್ ಚಿಕ್ಮುಳಿ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತ ವಿವಿದೋದ್ದೇಶ ಸ. ಸಂಘ (ನಿ.) ಸ್ಥಾಪಕ ಅಧ್ಯಕ್ಷ ಬಿಟ್ಟಿ ನೆಡುನಿಲಂ,
ಘಟಕದ ನಿಕಟಪೂರ್ವ ಅಧ್ಯಕ್ಷ ಜೇಸಿ ವಾಚಣ್ಣ ಕೆರೆಮೂಲೆ, ಕಾರ್ಯದರ್ಶಿ ಜೇಸಿ ಪ್ರಕಾಶ್ ಅಳ್ಪೆ, ಕಾರ್ಯಕ್ರಮ ನಿರ್ದೇಶಕ ಜೇಸಿ ಅನಂತಕೃಷ್ಣ ಮೊಗ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಜ ಲಯನ್ಸ್ ಕ್ಲಬ್ ಇದರ ಪೂರ್ವಾಧ್ಯಕ್ಷರು, ಸದಸ್ಯರುಗಳು, ಜೇಸಿಐ ಪಂಜ ಪಂಜಶ್ರೀ ಪೂರ್ವಾಧ್ಯಕ್ಷರು, ಸದಸ್ಯರುಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಜೇಸಿ ಜಗದೀಶ್ ಚಿಕ್ಮುಳಿ ಜೇಸಿವಾಣಿ ನುಡಿದರು. ಜೇಸಿ
ದೇವಿಪ್ರಸಾದ್ ಚಿಕ್ಮುಳಿ ಸ್ವಾಗತಿಸಿದರು. ಜೇಸಿ ಪ್ರಕಾಶ್ ಅಳ್ಪೆ ವಂದಿಸಿದರು.







