
ಕೊಡಗು ಸಂಪಾಜೆ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಮೇ 23 ರಂದು ಕೂಡಿ, ಮೇ 24 ರಂದು ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ಕಾಲಾವಧಿ ಪತ್ತನಾಜೆಯು ಹರಕೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.














ಮೇ 17 ರಂದು ಗೊನೆ ಕಡಿಯುವ ಮೂಹೂರ್ತ ಹಾಗೂ ಪೂರ್ವಭಾವಿ ಸಭೆ ನಡೆಯಿತು.
ಮೇ 23 ರಂದು ಸ್ಥಳ ಶುದ್ದೀಕರಣ ಹಾಗೂ ರಾತ್ರಿ 8 ಗಂಟೆಗೆ ಸಂಪಾಜೆ ದೇವಜನ ಬಾಲಕೃಷ್ಣ ಅವರ ಚಾವಡಿಯಿಂದ ಭಂಡಾರ ತರಲಾಯಿತು.ಮೇ 24 ರಂದು ಬೆಳಿಗ್ಗೆ 4 ಗಂಟೆಯಿಂದ ಬಿರ್ ಮೆರ್, ಮದಿಮಲ್, ಬಚ್ಚ ನಾಯ್ಕ, ಮೂವೆ, ಕರಿಯ ನಾಯಕ, ಗಿಳಿ ರಾಮ ಸೇರಿದಂತೆ ಆರು ಉಪದೈವಗಳ ನಡಾವಳಿ ನಡೆಯಿತು. ಬಳಿಕ ಶಿರಾಡಿ ಶ್ರೀ ರಾಜನ್ ದೈವ, ಪುರುಷ ದೈವಗಳ ನಡಾವಳಿ ಮತ್ತು ಮಾರಿಕಳ ಪ್ರವೇಶ , ಹರಕೆ, ಪ್ರಸಾದ ವಿತರಣೆ ಮತ್ತು ಆಗಮಿಸಿದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರ, ಅಧ್ಯಕ್ಷರು ,ಆಡಳಿತ ಸಮಿತಿಯ ಪದಾಧಿಕಾರಿಗಳು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಮನೆತನದವರು, ದೈವದ ಪೂಜಾರಿಗಳು ಹಾಗೂ ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.







