ಅಮರಪಡ್ನೂರು ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ

0

2025- 26 ನೇ ಸಾಲಿನ ವಿದ್ಯಾರ್ಥಿಯಾದ ಚರಿತ್ ಗೌಡ, ವಿದ್ಯಾರ್ಥಿನಿಯಾರಾದ ಸಿಂಚನ.ಕೆ, ಬೌಷಿತ ಪಿ.ವಿ, ಶಾಲಿನಿ. ಪಿ, ಇವರು 15000 ರೂ. ಮೌಲ್ಯದ ಬ್ಯಾಂಡ್ ಸೆಟ್ ನ್ನು ಕೊಡುಗೆಯಾಗಿ ನೀಡಿರುತ್ತಾರೆ. ಕೊಡುಗೆಯನ್ನು ಪಡೆದ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.


ಈ ಸಂದರ್ಭದಲ್ಲಿ ಕೊಡುಗೆ ನೀಡಿದ ವಿದ್ಯಾರ್ಥಿಗಳ ಪೋಷಕರಾದ ಈಶ್ವರ ಕಾಯರ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರುಗಳಾದ ಈಶ್ವರ ಕೆ., ವೆಂಕಟರಮಣ. ಪಿ, ಗೋಪಾಲಕೃಷ್ಣ ಭಟ್, ಶ್ರೀಮತಿ ಮೋಹಿನಿ, ಶಾಲಾ ಶಿಕ್ಷಕಿ ರಮ್ಯ ಎಂ.ಸಿ. ಮೊದಲಾದವರು ಉಪಸ್ಥಿತರಿದ್ದರು.